ಜಿಲ್ಲಾಧಿಕಾರಿ ದರ್ಶನ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ

0

ಕಲ್ಲು ಸಕ್ಕರೆಯಲ್ಲಿ ಪತ್ನಿ ಮತ್ತು ಮಗನ ತುಲಾಭಾರ ಸೇವೆ

ದ.ಕ.ಜಿಲ್ಲಾ ಜಿಲ್ಲಾಧಿಕಾರಿ ದರ್ಶನ್ ಅ.7 ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಜಿಲ್ಲಾಧಿಕಾರಿ ಅವರ ಪತ್ನಿ ಮತ್ತು ಪುತ್ರ ಸಮೇತ ಕಲ್ಲು ಸಕ್ಕರೆಯಲ್ಲಿ ತುಲಾ ಭಾರ ಸೇವೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ದೇವರಿಗೆ ಮಹಾಪೂಜೆ ಸೇವೆ ಪೂರೈಸಿದರು.

ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರುಗಳಾದ ಅಶೋಕ್ ನೆಕ್ರಾಜೆ, ಶ್ರೀಮತಿ ಲೀಲಾಮನಮೋಹನ್ , ಶ್ರೀಮತಿ ಪ್ರವೀಣ ರೈ, ಶ್ರೀಮತಿ ಸೌಮ್ಯ ಭರತ್, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಟಾಚಾರ ವಿಭಾಗದ ಮುಖ್ಯಸ್ಥ ಜಯ ರಾಮರಾವ್ ಮತ್ತಿತರರು ಉಪಸ್ಥಿತರಿದ್ದರು.