














ಪಾಕಶಾಸ್ತ್ರಜ್ಞ ಅಮರಪಡ್ನೂರು ಗ್ರಾಮದ ಅಜ್ಜಮೂಲೆ ಕೆ. ರಾಮಚಂದ್ರ ದೀಕ್ಷಿತರು ವಯೋಸಹಜವಾಗಿ ಇಂದು ನಿಧನರಾದರು.
ಪಾಕಶಾಸ್ತ್ರದಲ್ಲಿ ಹೆಸರು ಪಡೆದಿದ್ದ ಇವರು ಸಾವಿರಾರು ಕಡೆಗಳಲ್ಲಿ ಅಡುಗೆ ಮಾಡಿ ಪ್ರಸಿದ್ಧಿಯಾಗಿದ್ದರು. ಇವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು 5 ಮಂದಿ ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.










