ನಾಗಪಟ್ಣದಲ್ಲಿ ದೋಸ್ತ್ ವಾಹನ – ಬುಲೆಟ್ ಭೀಕರ ಅಪಘಾತ

0

ಬುಲೆಟ್ ಸವಾರ ಕಲ್ಲಪಳ್ಳಿಯ ಯುವಕ ಮೃತ್ಯು

ಸುಳ್ಯದಿಂದ ಕಲ್ಲಪಳ್ಳಿ ಕಡೆಗೆ ಹೋಗುತ್ತಿದ್ದ ಬುಲೆಟ್ ಬೈಕ್ ಮತ್ತು ಆ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ದೋಸ್ತ್ ವಾಹನ ನಾಗಪಟ್ಣ ಸೇತುವೆಯ ಬಳಿ ಪರಸ್ಪರ ಢಿಕ್ಕಿ ಹೊಡೆದುಕೊಂಡು, ತೀವ್ರ ಜಖಂಗೊಂಡ ಬುಲೆಟ್ ಸವಾರ ಕಲ್ಲಪಳ್ಳಿ ನಿವಾಸಿ ಪ್ರದೀಪ್ ಎಂ ಎಂ 40ವರ್ಷ (ಹರೀಶ್) ಎಂಬವರು ಸ್ಥಳದಲ್ಲೇ ಮೃತ್ಯುವಶರಾದ ಖಟನೆ ಇದೀಗ ರಾತ್ರಿ 8.30 ರ ಹೊತ್ತಿಗೆ ನಡೆದಿದೆ.

ಪ್ರದೀಪ್ ರವರು ಸುಳ್ಯದಿಂದ ಕಲ್ಲಪಳ್ಳಿಯ ಅವರ ಮನೆಯತ್ತ ತೆರಳುತ್ತಿದ್ದರು ಎನ್ನಲಾಗಿದ್ದು, ಅಲೆಟ್ಟಿ ಕಡೆಯಿಂದ ಬರುತ್ತಿದ್ದ ದೋಸ್ತ್ ವಾಹನಕ್ಕೆ ನಾಗಪಟ್ಣ ಸೇತುವೆ ಬಳಿ ಮುಖಾಮುಖಿ ಡಿಕ್ಕಿ ಆಗಿದೆ. ಆ ಸಂದರ್ಭ ನಿಯಂತ್ರಷ ಕಳೆದುಕೊಂಡ ದೋಸ್ತ್ ವಾಹನ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಗುದ್ದಿ ನಿಂತಿದೆ.

ತೀವ್ರ ಗಾಯಗೊಂಡ ಗಾಯಾಳು ಪ್ರದೀಪ್ ರನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ , ಅವರು ಆಗಲೇ ಮೃತಪಟ್ಟಿದ್ದರೆನ್ನಲಾಗಿದೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಮೃತರು ತಾಯಿ, ಪತ್ನಿ ಹಾಗೂ ಓರ್ವ ಪುತ್ರ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.