ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ,ಸಂಶೋಧಕ ಎ.ಕೆ ಹಿಮಕರ್ ಆಯ್ಕೆ
ಗುತ್ತಿಗಾರಿನ ವಳಲಂಬೆಯಲ್ಲಿ ನವೆಂಬರ್ ತಿಂಗಳಲ್ಲಿ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ ಎ.ಕೆ ಹಿಮಕರ್ ಅವರನ್ನು ಆಯ್ಕೆಮಾಡಿರುವುದಾಗಿ ತಿಳಿದು ಬಂದಿದೆ.















ಅ. 9 ರಂದು ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದಲ್ಲಿ ಪಂಜ ಹೋಬಳಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿರುವುದಾಗಿ ತಿಳಿದು ಬಂದಿದೆ.
ಪಂಜ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನವೆಂಬರ್ ತಿಂಗಳ 16 ರಂದು ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ನ ಸದಸ್ಯ ರಾಮಚಂದ್ರ ಪಲ್ಲತಡ್ಕ, ಪ್ರಭಾಕರ ಕಿರಿಭಾಗ, ರಾಮಚಂದ್ರ ಪಳಂಗಾಯ, ವೆಂಕಟ್ ವಳಲಂಬೆ, ಯೋಗೀಶ್ ಹೊಸೋಳಿಕೆ, ಕೇಶವ ಹೊಸೋಳಿಕೆ,ವಿಜಯ ಕುಮಾರ್ ಎಂ.ಡಿ, ಶಿವರಾಮ ಶಾಸ್ತ್ರೀ, ಗಂಗಾಧರ ದಂಬೆಕೋಡಿ, ಕುಶಾಲಪ್ಪ ತುಂಬತ್ತಾಜೆ, ಮಾಧವ ಮೂಕಮಲೆ, ರಮೇಶ್ ಮೆಟ್ಟಿನಡ್ಕ, ರಂಜಿತ್ ವಳಲಂಬೆ, ಕಿಶೋರ್ ಕುಮಾರ್ ಬೊಮ್ಮದೇರೆ ಪೈಕ, ಲೋಕೇಶ್ವರ ಡಿ.ಆರ್, ವಿಜೇಶ್ ಹಿರಿಯಡ್ಕ ದಿವಾಕರ ಮುಂಡೋಡಿ, ಪ್ರವೀಣ್ ಮುಂಡೋಡಿ, ದುಗ್ಗಪ್ಪ ಗೌಡ, ಕೊರೊತ್ತೋಡಿ ಮತ್ತಿತರರು ಉಪಸ್ಥಿತರಿದ್ದರು










