ಏನೆಕಲ್ಲು : ತೋಟದಿಂದ ಅಡಿಕೆ ಕಳ್ಳತನ

0

ಕಾದು ಕುಳಿತು ಕಳ್ಳನ ಹಿಡಿದು ಕೊಟ್ಟ ಸ್ಥಳೀಯರು

ಏನೆಕಲ್ಲಿನ ತೋಟವೊಂದಕ್ಕೆ ನುಗ್ಗಿ ಅಡಿಕೆ ಕಳ್ಳತನ ಮಾಡಿದ ಘಟನೆ ವರದಿಯಾಗಿದ್ದು ಕಳ್ಳತನ ನಡೆಸಿದಾತನ ಕಾದು ಕುಳಿತು ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ಏನೆಕಲ್ಲಿನಿಂದ ಅ‌.8 ರಂದು ವರದಿಯಾಗಿದೆ.

ಏನೆಕಲ್ಲಿನ ಸುಜಿತ್ ಎಂಬವರ ತೋಟಕ್ಕೆ ನುಗ್ಗಿದ ಕಳ್ಳ ಅಡಿಕೆ ಕಳ್ಳತನ ನಡೆಸಿದ್ದಾನೆ. ಕಾದು ಕುಳಿತು ಕಳ್ಳನನ್ನು ಹಿಡಿದಾಗ ಆತ ಗೌತಮ್ ಕುಲ್ನಡಿ ಎoಬಾತ ಎಂದು ಗೊತ್ತಾಗಿದೆ. ಅಡಕೆ ಕಳ್ಳತನ ನಡೆಸಿರುವುದು ಗೊತ್ತಾಗಿದ್ದು ಬಳಿಕ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ‌. ಅವರು ಬಂದು ಆತನನ್ನು ಠಾಣೆಗೆ ಒಯ್ದಿರುವುದಾಗಿ ತಿಳಿದು ಬಂದಿದೆ. ಕಳೆದ ಹಲವು ದಿನಗಳಲ್ಲಿ ಇದೇ ರೀತಿ ಕಳ್ಳತನ ನಡೆಸಿರುವುದರಿಂದ ಸಂಶಯದ ಮೆರೆಗೆ ಸ್ಥಳೀಯರು ಕಳ್ಳನನ್ನು ಹಿಡಿಯಲು ಕಾದು ಕುಳಿತು ಕಳ್ಳತನ ನಡೆಸಿದಾತನ್ನು ಹಿಡಿದೊಪ್ಪಿಸಿದ್ದಾರೆ.