ದಿ. ಕೇಶವ ಗೌಡ ಹಸಿಯಡ್ಕರವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಸುಳ್ಯ ಎ.ಪಿ.ಎಂ.ಸಿ ಮಾಜಿ ನಾಮನಿರ್ದೇಶಕ ಸದಸ್ಯ ಐವರ್ನಾಡು ಗ್ರಾಮದ ಹಸಿಯಡ್ಕ ಕೇಶವ ಗೌಡರವರು ಅ.1 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಅ.17 ರಂದು ಹಸಿಯಡ್ಕ ಮನೆಯಲ್ಲಿ ನಡೆಯಿತು.

ಸುಳ್ಯ ಕೆವಿಜಿ ಐ.ಟಿ.ಐ ನ ಪ್ರಾಂಶುಪಾಲ ದಿನೇಶ್ ಮಡ್ತಿಲರವರು ದಿ.ಕೇಶವ ಗೌಡ ಹಸಿಯಡ್ಕರವರ ಆದರ್ಶ ಗುಣಗಳ ಬಗ್ಗೆ ಮತ್ತು ಧಾರ್ಮಿಕ,ಸಾಮಾಜಿಕ ಕ್ಷೇತ್ರದಲ್ಲಿ,ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ದಿನಗಳು ಹಾಗೂ ಕುಟುಂಬದೊಂದಿಗೆ, ಬಂಧುಗಳೊಂದಿಗೆ ಇದ್ದ ಒಡನಾಟವನ್ನು ನೆನಪಿಸಿಕೊಂಡು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ಕೇಶವ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಸವಿತ,ಪುತ್ರ ಕವನ್ , ಸೊಸೆ ಶ್ರಾವ್ಯ ,ಕುಟುಂಬಸ್ಥರು ಉಪಸ್ಥಿತರಿದ್ದರು.