
ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಎದುರಿನ ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವು ಶುಕ್ರವಾರ ಮದ್ಯಾಹ್ನ 1.44ಕ್ಕೆ ನಡೆಯಿತು.
ಶ್ರೀ ಹರಿಹರೇಶ್ವರ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಸಿದ್ದಪರ್ವತದಿಂದ ಕೋಟಿ ತೀರ್ಥನದಿಯು ಹರಿಯುತ್ತಿದ್ದು ಈ ನದಿಯು ದೇವಸ್ಥಾನದ ಎದುರಿನಲ್ಲಿ ಸಂಗಮಗೊಂಡು ಅಘನಾಶಿನಿ ಯಾಗಿ ಮುಂದಕ್ಕೆ ಹರಿಯುತ್ತದೆ.
ಅಘನಾಶಿನಿ ಎಂಬಲ್ಲಿ ತೀರ್ಥೋದ್ಬವವಾಗುತ್ತದೆ ತುಲಾ ಸಂಕ್ರಮಣದಂದು ಮದ್ಯಾಹ್ನ 1.44ರ ಮಕರ ಲಗ್ನದ ಮುಹೂರ್ತದಲ್ಲಿ ತೀರ್ಥೊದ್ಬವವಾಗಿದ್ದು, ದೇವಲದ ಪ್ರದಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ನಂತರ ಭಕ್ತಾದಿಗಳಿಂದ ತೀರ್ಥಸ್ನಾನ ನೆರವೇರಿತು.

















ಈ ಸಂದರ್ಭದಲ್ಲಿ ಸಹಾಯಕ ಅರ್ಚಕ ಕೃಷ್ಣ ಕುಮಾರ್ ದೇವರಗದ್ದೆ,ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ವ್ಯವಸ್ಥಾಪನ ಸಮಿತಿಯ ಮಾಜಿ ಅದ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಸದಸ್ಯ ಚಂದ್ರಹಾಸ ಶಿವಾಲ, ಲೋಕನಾಥ ಕಿರಿಭಾಗ,ಕಿಶೋರ್ ಮುಂಡಾಜೆ, ಉಮೇಶ್ ಕಜ್ಜೋಡಿ,ಮೊನಪ್ಪ ನಿರ್ಪಾಡಿ,ತಾರಾನಾಥ ಮುಂಡಾಜೆ,ಲಕ್ಷ್ಮಣ ಕುಂಜತ್ತಾಡಿ, ರವಿಂದ್ರ ಮಿತ್ತಮಜಲು, ಮೋಹನ್‌ದಾಸ್ ದೊಡ್ಡಕಜೆ, ಪುಷ್ಪಲತಾ ಗುಡ್ಡೆಮನೆ,ತೀರ್ಥಕುಮಾರಿ,ಚಂದ್ರಕಲಾ ಅನೇಕ ಭಕ್ತಾದಿಗಳು ತೀರ್ಥಸ್ನಾನಗೈದರು. ವರದಿ: ಕುಶಾಲಪ್ಪ ಕಾಂತುಕುಮೇರಿ










