ಅಧ್ಯಕ್ಷರಾಗಿ ಜಾಕೆ ಮಾಧವ ಗೌಡ, ಸವಿತಾರ ಮುಡೂರು ಕಾರ್ಯದರ್ಶಿ
ಅಮೃತ ವರ್ಷ ಪೂರೈಸಿರುವ ಮತ್ತು ಇದೀಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಂಜೂರಾಗಿರುವ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಸಮಿತಿಯನ್ನು ರಚಿಸಲಾಗಿದೆ. ಇತ್ತೀಚೆಗೆ ನಡೆದ ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಅಭಿಮಾನಿಗಳ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತಲ್ಲದೆ ಡಿಸೆಂಬರ್ನಲ್ಲಿ ಅಮೃತಮಹೋತ್ಸವ ಕಾರ್ಯಕ್ರಮವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.















ಸಹಕಾರಿ ಧುರೀಣ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿರುವ ಜಾಕೆ ಮಾಧವ ಗೌಡ ಇವರನ್ನು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಸವಿತಾರ ಮುಡೂರು ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆರಿಸಲಾಯಿತು.
ಗೌರವಾಧ್ಯಕ್ಷರುಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ , ಕಾರ್ಯದರ್ಶಿಗಳಾಗಿ ಗುರುಪ್ರಸಾದ್ ತೋಟ, ಕಾಲೇಜಿನ ಪ್ರಾಂಶುಪಾಲ ಚಿದಾನಂದ, ಮುಖ್ಯ ಶಿಕ್ಷಕ ದೇವಿಪ್ರಸಾದ್, ಕೋಶಾಧಿಕಾರಿಯಾಗಿ ಜಯರಾಮ ಕಂಬಳ, ಉಪಾಧ್ಯಕ್ಷರುಗಳಾಗಿ ಬಿ. ಕೆ. ಮಾಧವ ಗೌಡ
ಅಬ್ದುಲ್ ಗಪೂರ್ ಕಲ್ಮಡ್ಕ, ಡಾ. ದೇವಿಪ್ರಸಾದ್ ಕಾನತ್ತೂರು, ಕಾರ್ಯಪ್ಪ ಗೌಡ ಚಿದ್ಗಲ್, ದೊಡ್ಡಣ್ಣ ಬರೆಮೇಲು, ಪ್ರಧಾನ ಸಂಚಾಲಕರಾಗಿ ಚಿನ್ನಪ್ಪ ಸಂಕಡ್ಕ, ಗೌರವ ಸಲಹೆಗಾರರಾಗಿ, ಸುಬ್ರಾಯ ಭಟ್ ಅಲಕ, ಮಹೇಶ್ ಕುಮಾರ್ ಕರಿಕ್ಕಳ, ರವೀಂದ್ರನಾಥ ರೈ ಕೇನ್ಯ, ಆನಂದ ಗೌಡ ಕಂಬಳ, ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ , ಡಾ. ರಾಮಯ್ಯ ಭಟ್, ಜಯರಾಮ್ ರಾವ್ ಕಾಂತುಕುಮೇರಿ, ಪ್ರಕಾಶ್ ಡಿಸೋಜ, ತುಕಾರಾಂ ಏನೆಕಲ್ಲು, ಸುಬ್ರಹ್ಮಣ್ಯ ಕುಳ, ಸುಬ್ರಹ್ಮಣ್ಯ ಕಣ್ಕಲ್, ಪ್ರಭಾಕರ ಕಿರಿಭಾಗ, ರಾಮಕೃಷ್ಣ ರೈ ಮಾಲೆಂಗ್ರಿ, ಸುಚಿನ್ನ ಕಾಣಿಕೆ, ಸೋಮಶೇಖರ್ ಬಡ್ಡಕೋಟಿ ಆಯ್ಕೆಗೊಂಡರು.
ಮುಂದಿನ ಸಮಿತಿಯ ವಿಸ್ತರಣೆ ಮಾಡಲು ನೂತನ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಯಿತು.










