














ಹಿರಿಯ ಯಕ್ಷಗಾನ ಕಲಾವಿದರಾದ ರಂಗಮನೆಯ ಸುಜನಾ ಸುಳ್ಯ ( ಎಸ್.ಎನ್.ಜಯರಾಮ)ರವರು ಇಂದು ಮುಂಜಾನೆ 5.50 ಕ್ಕೆ ವಿಧಿವಶರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ವಯೋಸಹಜ ನಿಶ್ಶಕ್ತಿಯಿಂದಿದ್ದ ಅವರು ಎರಡು ದಿನಗಳಿಂದ ಆರೋಗ್ಯ ಹದಗೆಟ್ಟು ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪುತ್ರ ಜೀವನ್ ರಾಂ ರವರು ಆಸ್ಪತ್ರೆಯಲ್ಲೆ ತಂದೆಯ ಜತೆಗಿದ್ದರು.










