ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ ಸುಳ್ಯ ಇದರ ಚುನಾವಣೆ

0

ಒಟ್ಟು 13 ಸ್ಥಾನಕ್ಕೆ 20 ಮಂದಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನವಂಬರ್ 2 ರಂದು ಚುನಾವಣೆ ನಡೆಯಲಿದೆ.

ಸಾಮಾನ್ಯ/ಪ.ಜಾತಿ/ಪ.ಪಂಗಡ/ಹಿಂದುಳಿದ ವರ್ಗ ಪ್ರವರ್ಗ ‘ಎ’ ಮತ್ತು ‘ಬಿ’ ಹಾಗೂ ಮಹಿಳೆಯರಿಗೆ ಮೀಸಲಿರಿಸಿದ ಸ್ಥಾನಗಳಿಗೆ ಈಗೆ ಒಟ್ಟು 15 ಸ್ಥಾನಗಳಿದ್ದು ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಇರುವ ಕಾರಣ 13 ಸ್ಥಾನಗಳಿಗೆ ಮತದಾನ ನಡೆಯಲಿದೆ.ಸಾಮಾನ್ಯ 9, ಮಹಿಳಾ ಮೀಸಲು 2, ಪ್ರವರ್ಗ ಎ 1 ಪ್ರವರ್ಗ ಬಿ 1. ಒಟ್ಟು 13 ಸ್ಥಾನಗಳಿಗೆ ಸದಸ್ಯರ ಆಯ್ಕೆ ನಡೆಯಲಿದೆ.


ಈ ಸ್ಥಾನಗಳಿಗೆ ಈಗಾಗಲೇ 20 ಮಂದಿ ಸದಸ್ಯರು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಮಹಮ್ಮದ್ ರಿಯಾಜ್ ಗುರುಂಪು.ಎಸ್.ಎಂ ಬಾಪು ಸಾಹೇಬ್ ಅರಂಬೂರು ,ಅಬ್ದುಲ್ ರಹಿಮಾನ್ ಮೇನಾಲ,ಹಸೈನಾರ್ ಎ ಕೆ ಕಲ್ಲುಗುಂಡಿ, ಮಹಮ್ಮದ್ ರಫೀಕ್ ಸಿಎಂ ಐವತ್ತೊಕ್ಲು, ಕೆ ಬಿ ಇಬ್ರಾಹಿಂ ಮಂಡೆಕೋಲು, ಮುಹಿಯದ್ದೀನ್ ಹಾಜಿ ಕೆ ಎಂ ನಾವೂರು, ಬಿ ಉಮ್ಮರ್ ಕಲ್ಲುಮುಟ್ಲು, ಮಹಮ್ಮದ್ ಅನ್ಸಾರ್ ಬೆಳ್ಳಾರೆ, ಅಬೂಬಕ್ಕರ್ ಸಿದ್ದೀಕ್ ಜಿ ಜೀರ್ಮುಖಿ, ಮಹಮ್ಮದ್ ಪೈಸಲ್ ಜೀರ್ಮುಖಿ, ಎಸ್ ಸಂಶುದ್ದೀನ್ ಅರಂಬೂರು, ಮಹಮ್ಮದ್ ಶರೀಫ್ ಎಂ ಕೆ ನಾವೂರು,ಮೊಹಮ್ಮದ್ ಹನೀಫ್ ಎಸ್ ಕೆ ಸಂಪಾಜೆ,

ಹಿಂದುಳಿದ ವರ್ಗ ಪ್ರವರ್ಗ’ ಎ ‘2 ಐ.ಕೆ ಮಹಮ್ಮದ್ ಇಕ್ಬಾಲ್ ಎಲಿಮಲೆ, ಹಿಂದುಳಿದ ವರ್ಗ ಪ್ರವರ್ಗ ಬಿ ಜಾರ್ಜ್ ಡಿಸೋಜ, ಮಹಿಳಾ ಮೀಸಲು ಸ್ಥಾನಕ್ಕೆ ಶ್ರೀಮತಿ.ಅಮಿನಾ ಎಸ್ ಮಿಲಿಟರಿ ಗ್ರೌಂಡ್, ಶ್ರೀಮತಿ ಸಾಜಿದಾ ಜಿ ಎ, ಶ್ರೀಮತಿ ಜೂಲಿಯಾನ ಕ್ರಾಸ್ತಾ ಬೀರಮಂಗಲ, ಶ್ರೀಮತಿ ಅಫೋಲಿನ್ ಡಿಸೋಜಾ ಇವರುಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.ನಾಮಪತ್ರ ಪರಿಶೀಲನೆ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ.