ಸಂಸದ ಕ್ಯಾ. ಬ್ರಿಜೇಶ್ ಚೌಟರಿಗೆ ಡಾ.ರೇಣುಕಾಪ್ರಸಾದ್ ರಿಂದ ಅಹ್ವಾನ
ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಡಾ. ರೇಣುಕಾ ಪ್ರಸಾದ್ ಕುರುಂಜಿ ಮತ್ತು ಮನೆಯವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ನ. 10 ರ ಪೂರ್ವಾಹ್ನ ಗಂಟೆ 11:00ಕ್ಕೆ ನಡೆಯಲಿದೆ.
















ಈ ಕಾರ್ಯಕ್ರಮಕ್ಕೆ ಡಾ.ರೇಣುಕಾ ಪ್ರಸಾದ್ ಕುರುಂಜಿಯವರು ದಕ್ಷಿಣ ಕನ್ನಡ ಜಿಲ್ಲೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕುಕ್ಕೆ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆ, ಡಾ. ಮನೋಜ್ ಅಡ್ಡoತಡ್ಕ, ಕಮಲಾಕ್ಷ ನಂಗಾರು ಉಪಸ್ಥಿತರಿದ್ದರು.










