ಗುತ್ತಿಗಾರಿನಲ್ಲಿ ಕೀರ್ತಿ ಮೋಟಾರ್ಸ್ ಶುಭಾರಂಭ

0

ಹೀರೊ ಬೈಕ್ ಗಳ ಶೋರೂಂ ಕೀರ್ತಿ ಮೋಟಾರ್ಸ್ ಕಡಬ ಇದರ ಶಾಖೆ ಗುತ್ತಿಗಾರಿನ ಮುತ್ತಪ್ಪ ದೇವಸ್ಥಾನದ ಮುಂಭಾಗ ಕುಮಾರ ಕಾಂಪ್ಲೆಕ್ಸ್ ನಲ್ಲಿ ಅ.30 ರ ಬೆಳಗ್ಗೆ ಶುಭಾರಂಭಗೊಂಡಿತು.

ಇಂದು ಮುಂಜಾನೆ ಗಣಹವನ ನಡೆಯಿತು. ಸಂಸ್ಥೆಯನ್ನು ಬಾಜಪ ಸುಳ್ಯ ಇದರ ಅಧ್ಯಕ್ಷ ವೆಂಕಟ್ ವಳಲಂಬೆ ಉದ್ಘಾಟಿಸಿದರು. ಹಿರಿಯ ಸಹಕಾರಿ ಮುಳಿಯ ತಿಮ್ಮಪ್ಪಯ್ಯ, ಕುಮಾರ ಕಾಂಪ್ಲೆಕ್ಸ್ ಮಾಲಕ ನೀಲಪ್ಪ, ಸೀತಾರಾಮ ಎಣ್ಣೆಮಜಲು, ನವೀನ್ ಗುತ್ತಿಗಾರು, ಶ್ರೀಮತಿ ರೆಷ್ಮಾ ಕಟ್ಟೆಮನೆ, ಕೀರ್ತಿ ಮೋಟಾರ್ಸ್ ನ ಮಾಲಕ ನರೇಶ್, ಹಿರಿಯ ಸಿಬ್ಬಂದಿ ತಿಮ್ಮಪ್ಪ, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

ಕೀರ್ತಿ ಮೋಟಾರ್ಸ್ ನಲ್ಲಿ ಹೀರೋ ಹೊಸ ದ್ವಿಚಕ್ರ ವಾಹನಗಳ ಮಾರಾಟ, ಸರ್ವಿಸ್‌, ರಿಪೇರಿ, ಸ್ಪೇರ್ ಪಾರ್ಟ್ಸ್ ವ್ಯವಸ್ಥೆ ಇದೆ. ಶುಭಾರಂಭ ಪ್ರಯುಕ್ತ ನವೆಂಬರ್ 5 ರೊಳಗೆ ಹೊಸ ಬೈಕ್ ಬುಕ್ಕಿಂಗ್ ಮಾಡಿದವರಿಗೆ ₹ 2000 ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ.