ದ.ಕ ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಇಂದಿರಾ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮವು ಅ.31 ರಂದು ನಡೆಯಿತು.















ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ನಡೆಯಿತು. ಬಳಿಕ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಇಂದಿರಾ ಗಾಂಧಿಯವರ ಗುಣಗಾನ ಮಾಡಿದರು .0ಉಳುವವನೇ ಹೊಲದ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ ಕಾರ್ಯಕ್ರಮ ಹಲವು ಕ್ರಾಂತಿಕಾರಿ ಯೋಜನೆ ನಿರ್ಧಾರವನ್ನು ನೆನಪಿಸಿದರ ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಜಿ.ಕೆ ಹಮೀದ್,ಮಾಜಿ ಅಧ್ಯಕ್ಷರಾದ ಸುಂದರಿ ಮುಂಡಡ್ಕ , ಉಪಾಧ್ಯಕ್ಷರಾದ ಎಸ್ ಕೆ. ಹನೀಫ್ ಸಂಪಾಜೆ ಸದಸ್ಯರುಗಳಾದ ಲಿಸ್ಸಿ ಮೊನಾಲಿಸಾ, ವಿಮಲಾ ಪ್ರಸಾದ್, ಆಶಾ ವಿನಯ್, ವಿಜಯ ಕುಮಾರ್ ಆಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಜಿ.ಕೆ ಹಮೀದ್ ಸರ್ವರನ್ನು ಸ್ವಾಗತಿಸಿ , ಸುಮತಿ ಶಕ್ತಿವೇಲು ವಂದಿಸಿದರು.











