ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಚುನಾವಣೆ

0

ಮಹಮ್ಮದ್ ಇಕ್ಬಾಲ್ ಎಲಿಮಲೆಯವರ ತಂಡಕ್ಕೆ ಭರ್ಜರಿ ಗೆಲುವು, ಪಟಾಕಿ ಸಿಡಿಸಿ ಸಂಭ್ರಮ

ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮಹಮ್ಮದ್ ಇಕ್ಬಾಲ್ ಎಲಿಮಲೆ ರವರ ತಂಡ ಭರ್ಜರಿ ಗೆಲುವು ಸಾಧಿಸಿದೆ. ನವಂಬರ್ 2 ರಂದು ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನ ನಡೆಯಿತು.

ಸಾಮಾನ್ಯ 9, ಮಹಿಳಾ ಮೀಸಲು 2 ಪ್ರವರ್ಗ ಎ 1 ಪ್ರವರ್ಗ ಬಿ 1. ಒಟ್ಟು 13 ಸ್ಥಾನಗಳಿಗೆ ಸದಸ್ಯರ ಆಯ್ಕೆಯಲ್ಲಿ ಪ್ರ ಪ್ರವರ್ಗ ಎ ಇಕ್ಬಾಲ್ ಎಲಿಮಲೆ ಪ್ರವರ್ಗ ಬಿ ಜಾರ್ಜ್ ಡಿಸೋಜ ಅವಿರೋಧವಾಗಿ ಆಯ್ಕೆಗೊಂಡಿದ್ದರು.

ಉಳಿದ ಅಭ್ಯರ್ಥಿಗಳಿಗೆ ನಡೆದ ಮತದಾನದಲ್ಲಿ ಸಾಮಾನ್ಯ ಕ್ಷೇತ್ರದಿಂದ ಮಹಮ್ಮದ್ ರಿಯಾಜ್ ಗುರುಂಪು 79,ಎಸ್.ಎಂ ಬಾಪು ಸಾಹೇಬ್ ಅರಂಬೂರು 80 ,ಅಬ್ದುಲ್ ರಹಿಮಾನ್ ಮೇನಾಲ121,ಹಸೈನಾರ್ ಎ ಕೆ ಕಲ್ಲುಗುಂಡಿ 128 ಮಹಮ್ಮದ್ ರಫೀಕ್ ಸಿಎಂ ಐವತ್ತೊಕ್ಲು 119 ಕೆ ಬಿ ಇಬ್ರಾಹಿಂ ಮಂಡೆಕೋಲು 117 ಮುಹಿಯದ್ದೀನ್ ಹಾಜಿ ಕೆ ಎಂ ನಾವೂರು 129 ಮಹಮ್ಮದ್ ಅನ್ಸಾರ್ ಬೆಳ್ಳಾರೆ 119,ಮಹಮ್ಮದ್ ಶರೀಫ್ ಎಂ ಕೆ 32 ಮೊಹಮ್ಮದ್ ಹನೀಫ್ ಎಸ್ ಕೆ ಸಂಪಾಜೆ 123
ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ. ಅಮಿನಾ ಎಸ್ ಮಿಲಿಟರಿ ಗ್ರೌಂಡ್ 106, ಶ್ರೀಮತಿ ಸಾಜಿದಾ ಜಿ ಎ 109, ಶ್ರೀಮತಿ ಜೂಲಿಯಾನ ಕ್ರಾಸ್ತಾ ಬೀರಮಂಗಲ 29, ಶ್ರೀಮತಿ ಅಫೋಲಿನ್ ಡಿಸೋಜಾ 56 ಮತಗಳನ್ನು ಪಡೆದುಕೊಂಡಿದ್ದಾರೆ.


ಈ ರೀತಿ ಇಕ್ಬಾಲ್ ಎಲಿಮಲೆ ರವರ ತಂಡವು ಭರ್ಜರಿ ಗೆಲುವು ಸಾಧಿಸಿದ್ದು ಮಹಿಳಾ ಕ್ಷೇತ್ರದಿಂದ ಜೂಲಿಯಾನ ಕ್ರಾಸ್ತಾ ಹಾಗೂ ಅಪೋಲಿಯನ್ ರವರಿಗೆ ಹಿನ್ನಡೆ ಉಂಟಾಗಿದೆ.

ಜಯ ಸಾಧಿಸಿರುವ ಇಕ್ಬಾಲ್ ರವರ ತಂಡದ ಸದಸ್ಯರು ಸೊಸೈಟಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.