ಸುಳ್ಯದ ವಿಷ್ಣು ಸರ್ಕಲ್ ನಿವಾಸಿ ಪ್ರವೀಣ್ ಇಂಡಸ್ಟ್ರಿಸ್ ಮಾಲಕ ಶ್ರೀನಿವಾಸ್ ರವರ ಪುತ್ರ
ದೀಪಕ್ ರವರು ಇಂದು ಸಂಜೆ ಮಡಿಕೇರಿಯಲ್ಲಿ ಹೃದಯಾಘಾತದಿಂದ ನಿಧನ ರಾಗಿರುತ್ತಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು.















ಮೃತರು ಅವಿವಾಹಿತ ರಾಗಿದ್ದು ತಂದೆ ಶ್ರೀನಿವಾಸ್, ತಾಯಿ ಶ್ರೀಮತಿ ಚಂದ್ರಿಕಾ, ಸಹೋದರ ಅನಿಲ್, ವಿನೋದ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಇಂದು ಸಂಜೆ ತನ್ನ ಕಾರಿನಲ್ಲಿ ಗೆಳೆಯನೊಂದಿಗೆ ಮಡಿಕೇರಿಗೆ ಹೋಗಿದ್ದರು. ಅಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರುಸುಳ್ಯ ಶಾರದಾಂಬಾ ಸೇವಾ ಸಮಿತಿಯ ಸದಸ್ಯರಾಗಿ, ವಿಷ್ಣು ಸರ್ಕಲ್
ವೀರಕೇಸರಿ ಬಳಗದ ಪದಾಧಿಕಾರಿಯಾಗಿ ಉತ್ತಮ ಸಂಘಟಕರಾಗಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಅಂಬಟೆಡ್ಕದಲ್ಲಿ ರೆಡ್ ಬರ್ಡ್ ಹೆಸರಿನ ರೇಡಿಮಡ್ ವಸ್ತ್ರ ಮಳಿಗೆ ಹೊಂದಿದ್ದರು.










