














ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಟೀಮ್ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಹಾಗೂ ಅವರ ಮನೆಯವರು, ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸುವ ಬೆಳ್ಳಿರಥವನ್ನು ಸ್ವೀಕರಿಸುವುದಕ್ಕೆ ಕೋಟೇಶ್ವರಕ್ಕೆ ಹೊರಡುವ ಮೊದಲು ಇಂದು ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಒಎಲ್ಇ ಕಮಿಟಿ ಬಿ ತಂಡದ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ಎಒಎಲ್ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಶ್ರೀಮತಿ ವರಮಹಾಲಕ್ಷ್ಮೀ ಸುಬ್ಬಯ್ಯ , ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕೆವಿಜಿ ಐಟಿಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಕೆವಿಜಿ ಪವರ್ ಹೌಸ್ ಕಾರ್ಯಪಾಲ ಇಂಜಿನಿಯರ್ ವಸಂತ ಕಿರಿಭಾಗ, ಕೆವಿಜಿ ಪಾಲಿಟೆಕ್ನಿಕ್ ನ ಪ್ರಸನ್ನ ಕಲ್ಲಾಜೆ, ಅರುಣ್ ಕುರುಂಜಿ ಜತೆಗಿದ್ದರು.
ವಿಶೇಷ ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಸುಳ್ಯಕ್ಕೆ ಹಿಂತಿರುಗಿರುವ ಅವರು ಮಧ್ಯಾಹ್ನ ಕೋಟೇಶ್ವರಕ್ಕೆ ತೆರಳಲಿದ್ದಾರೆಂದು ತಿಳಿದುಬಂದಿದೆ.










