ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ ಸ್ಥಳೀಯ ಪಂಚಾಯತ್ ಸದಸ್ಯರು
ಸುಳ್ಯ ನಗರ ಪಂಚಾಯತ್ ಹಳೆಗೇಟು ವಾರ್ಡಿನಲ್ಲಿ ಗುಂಡಿಯಡ್ಕ ಸಮೀಪ ವಾರ್ಡ್ ಸದಸ್ಯರ ಮನೆಯ ಬಳಿ ಕಳೆದ ಒಂದು ವಾರಗಳಿಂದ ಕುಡಿಯುವ ನೀರು ಬಾರದೆ ಸ್ಥಳೀಯ ಕೆಲವು ಮನೆಗಳಲ್ಲಿ ಜನರು ಸಂಕಷ್ಟದಲ್ಲಿದ್ದರು.















ಈ ಬಗ್ಗೆ ಇಂದು ನ 4 ರಂದು ಬೆಳಿಗ್ಗೆ ಸುದ್ದಿ ವೆಬ್ಸೈಟ್ ಮೂಲಕ ವರದಿ ಮಾಡಿ ಈ ಬಗ್ಗೆ ಅಧಿಕಾರಿಗಳ ಮತ್ತು ಸ್ಥಳೀಯ ಸದಸ್ಯರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದನೆ ಎಂಬಂತೆ ಕೂಡಲೇ ಸ್ಪಂದಿಸಿರುವ ಸ್ಥಳೀಯ ನಗರ ಪಂಚಾಯತ್ ಸದಸ್ಯರು ಹಾಗೂ ಪಂಚಾಯತ್ ಅಧಿಕಾರಿಗಳು ಪೈಪಿನ ದುರಸ್ತಿಕರಣ ಮಾಡಿಸಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿ ಕೊಟ್ಟಿದ್ದಾರೆ.
ಇವರ ಸ್ಪಂದನೆಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.










