















ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2025-26 ನೇ ಸಾಲಿನ ವಾರ್ಷಿಕ “ಚಂಪಾಷಷ್ಠಿ” ಮಹಾರಥೋತ್ಸವ ಜಾತ್ರೆ ಸಿದ್ಧತೆಗಳ ಪೂರ್ವಭಾವಿ ಸಭೆ ನ.5 ರಂದು ನಡೆಯಲಿದೆ.
ಇಲಾಖಾ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರ ಸುಳ್ಯ ಇದರ ಶಾಸಕಿ ಭಾಗೀರಥಿ ಮುರುಳ್ಯ, ಇವರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಜಿಲ್ಲಾಧಿಕಾರಿ, ಇವರ ಘನ ಉಪಸ್ಥಿತಿಯಲ್ಲಿ ಪೂರ್ವಾಹ್ನ 11.30 ಗಂಟೆಗೆ ನಡೆಯಲಿದೆ. ಶ್ರೀ ದೇವಳದ ಆಡಳಿತ ಕಛೇರಿಯ ಎರಡನೇ ಮಹಡಿಯ ಹುಂಡಿ ಎಣಿಕೆ ಹಾಲ್ ನಲ್ಲಿ ಸಭೆ ಜರುಗಿಸಲಿದ್ದು, ಸಾರ್ವಜನಿಕರೂ ಭಾಗವಹಿಸುವಂತೆ ಕೋರಲಾಗಿದೆ.










