ಕನಕಮಜಲು ಮೂಲಕ ಸುಳ್ಯ ಪ್ರವೇಶಿಸಿದ ಬೆಳ್ಳಿರಥ

0

ಡಾ. ರೇಣುಕಾ ಪ್ರಸಾದ್ ಕೆ.ವಿ ಮತ್ತು ಮನೆಯವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸಮರ್ಪಣೆಯಾಗಲಿರುವ ಬೆಳ್ಳಿರಥ ಸಂಜೆ 8.30 ರ ವೇಳೆಗೆ ಕನಕಮಜಲು ಮೂಲಕ ಸುಳ್ಯ ತಾಲೂಕಿಗೆ ಪ್ರವೇಶಿಸಿದೆ.

ಕನಕಮಜಲು ಶ್ರೀ ಆತ್ಮರಾಮ ಭಜನಾ ಮಂದಿರದ ಬಳಿ ಭಜನಾ ಮಂದಿರದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರ ಪ್ರಮುಖರು ಬೆಳ್ಳಿರಥ ಸ್ವಾಗತಿಸಿದರು.