ಸುಳ್ಯದ ಜಟ್ಟಿಪಳ್ಳ ರಸ್ತೆಯ ಬೊಳಿಯಮಜಲು ಜಂಕ್ಷನ್ ನಲ್ಲಿ ಆಟೋ ರಿಕ್ಷಾವೊಂದು ನ್ಯಾನೋ ಕಾರಿಗೆ ಡಿಕ್ಕಿ ಹೊಡೆದ ಘಟನೆ ನ. 3 ರಂದು ಸಂಜೆ ವರದಿಯಾಗಿದೆ.















ಡಿಕ್ಕಿ ಹೊಡೆದ ಪರಿಣಾಮ
ಆಟೋ ಚಾಲಕ ಪ್ರಭಾಕರ ರವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆದಾಖಲಿಸಲಾಯಿತು. ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡ ಅವರನ್ನು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಎ. ಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮತ್ತು ರಿಕ್ಷಾ ಜಖಂಗೊಂಡಿದೆ.










