ಶಿವಮೊಗ್ಗದಲ್ಲಿ ಕಳ್ಳರು ಪತ್ತೆ
ಮಡಿಕೇರಿ ಠಾಣೆಯಲ್ಲಿ ವಿಚಾರಣೆ
ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಮನೆಯೊಂದರಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ ಇಬ್ಬರು ಶಂಕಿತರನ್ನು ಮಡಿಕೇರಿ ಪೋಲೀಸರು ಪತ್ತೆ ಹಚ್ಚಿದ್ದು ಅವರನ್ನು ಸೆರೆ ಹಿಡಿದು ಮಡಿಕೇರಿಗೆ ತಂದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.















ಚೆಂಬು ಗ್ರಾಮದ ಕುದ್ರೆಪಾಯ ವೀರಪ್ಪ ಗೌಡ ಪೂಜಾರಿಗದ್ದೆ ಎಂಬವರ ಮನೆಯಿಂದ ನ.೫ರಂದು ಚಿನ್ನ ಹಾಗೂ ನಗದು ಕಳವಾಗಿತ್ತು.
ಅದೇ ದಿನ ಶಬರಿಮಲೆ ಯಾತ್ರಾರ್ಥಿಗಳ ವೇಷದಲ್ಲಿ ಕುದ್ರೆಪಾಯ ಪರಿಸರದಲ್ಲಿ ಮನೆ ಮನೆಗೆ ಹೋಗಿ ದೇಣಿಗೆ ನಡೆಸುತ್ತಿದ್ದರೆಂದೂ, ಅವರು ವೀರಪ್ಪ ಗೌಡರ ಪಕ್ಕದ ಮನೆಗೆ ಕೂಡ ಹೋಗಿದ್ದರೆಂದೂ, ಅವರೇ ವೀರಪ್ಪ ಗೌಡರ ಮನೆಗೆ ಹೋಗಿ ಕಪಾಟಿನ ಬೀಗ ಮುರಿದು ನಗದು ಹಾಗೂ ಚಿನ್ನ ದೋಚಿ ಹೋಗಿರಬಹುದೆಂದೂ ಶಂಕಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಡಿಕೇರಿ ಪೋಲೀಸರು ತನಿಖೆ ನಡೆಸತೊಡಗಿದ್ದು, ಇದೀಗ ಕಳ್ಳರು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಅವರನ್ನು ಸೆರೆ ಹಿಡಿದು ಮಡಿಕೇರಿಗೆ ಕರೆತಂದಿದ್ದು ಠಾಣೆಯಲ್ಲಿ ವಿಚಾರಣೆಗೊಳಪಡಿಸುತ್ತಿದ್ದಾರೆಂದು ತಿಳಿದುಬಂದಿದೆ.









