ಕಳಂಜ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಕಳಂಜ ಅಂಗನವಾಡಿ ಕೇಂದ್ರದಲ್ಲಿ ನ.14 ರಂದು ಮಕ್ಕಳ ದಿನಾಚರಣೆ ಆಚರಿಸಲಾಯಿತು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಮಕ್ಕಳಿಗೆ ನೃತ್ಯ ಸ್ಪರ್ಧೆಗಳು ಏರ್ಪಟ್ಟವು.
ಪುಟಾಣಿ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಪುಟಾಣಿ ಮಹಮ್ಮದ್ ಹಾಸೀಬ್ ನ ಹುಟ್ಟುಹಬ್ಬವನ್ನು ಈ ವೇಳೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಳಂಜ ಹಾಲು ಸೊಸೈಟಿ ಅಧ್ಯಕ್ಷ ರುಕ್ಮಯ್ಯ ಗೌಡ, ಕಳಂಜ ಗ್ರಾಮದ ಸಮುದಾಯ ಆರೋಗ್ಯಾಧಿಕಾರಿ ಶಿಲ್ಪಾ, ಮಹಿಳಾ ಹಿರಿಯ ಆರೋಗ್ಯ ಕಾರ್ಯಕರ್ತೆ ಬೇಬಿ ಕೆ.ಸಿ , ಆಶಾ ಕಾರ್ಯಕರ್ತೆ ಜಯಂತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುನೀತ ಪಿ., ಅಂಗನವಾಡಿ ಕಾರ್ಯಕರ್ತೆ ಲಲಿತ, ಸ್ತ್ರೀಶಕ್ತಿ ಸದಸ್ಯರು, ಅಂಗನವಾಡಿ ಸಹಾಯಕಿ ಕಮಲ ಹಾಗೂ ಮತ್ತಿತರ ಗಣ್ಯರು ಊರವರು, ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಹಭೋಜನ ನಡೆಯಿತು.