ಧ್ವಜಾರೋಹಣ ನಡೆಸಿದ ಗಣ್ಯರು, ಪುಸ್ತಕ ಮಳಿಗೆ ಉದ್ಘಾಟನೆ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು, ಪಂಜ ಹೋಬಳಿ ಘಟಕ, ಪಂಜ ಹೋಬಳಿ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿಯ ಆಶ್ರಯದಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ನಡೆಯಲಿದ್ದು, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷ ಬಿ.ಕೆ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಸಮ್ಮೇಳನ ಅಧ್ಯಕ್ಷ ಎ.ಕೆ ಹಿಮಕರ ಅವರು ಮೆರವಣಿಗೆಗೆ ತೆಂಗಿನಕಾಯಿ ಒಡೆದು ಧ್ವಜ ಬೀಸಿ ಚಾಲನೆ ನೀಡಿದರು.

















ಸುಳ್ಯ ಶಾಸಕಿ ಕು.ಭಾಗಿರಥಿ ಮುರುಳ್ಯ ರಾಷ್ಟ್ರಧ್ವಜಾರೋಹಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನಡೆಸಿಕೊಟ್ಟರು. ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಿದರು.

ಈ ಸಂದರ್ಭ ಶಾಸಕಿ ಭಾಗೀರಥಿ ಮುರುಳ್ಯ, ಹೋಬಳಿ ಸಾಹಿತ್ಯ ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕಾಸಾಪ ಸುಳ್ಯ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪಂಜ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ವಳಲಂಬೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸಂಘಟನಾ ಸಮಿತಿಯ ಪದಾಧಿಕಾರಿಗಳಾದ ಕೇಶವ ಹೆಚ್.ಬಿ.ಹೊಸೋಳಿಕೆ, ವೆಂಕಪ್ಪ ಕೇನಾಜೆ, ಕುಶಾಲಪ್ಪ ತುಂಬತ್ತಾಜೆ, ಪ್ರಭಾಕರ ಕಿರಿಭಾಗ, ರಾಮಚಂದ್ರ ಪಳಂಗಾಯ, ಯೋಗೀಶ್ ಹೊಸೋಳಿಕೆ, ದಿನೇಶ್ ಹಾಲೆಮಜಲು,ಚಂದ್ರಾವತಿ ಬಡ್ಡಡ್ಕ, ಡಾಟ ಪುರುಷೋತ್ತಮ ಕರಂಗಲ್ಲು, ಶಿವರಾಮ ಶಾಸ್ತ್ರಿ, ರಮೇಶ್ ಮೆಟ್ಟಿನಡ್ಕ, ವಿಜೇಶ್ ಹಿರಿಯಡ್ಕ, ಗಂಗಾಧರ ದಂಬೆಕೋಡಿ, ತೇಜಪ್ಪ ಸಂಪ್ಯಾಡಿ, ಲೋಕೇಶ್ವರ ಡಿ.ಆರ್, ಕಿಶೋರ್ ಕುಮಾರ್, ಶ್ರೀಕಾಂತ್ ಮಾವಿನಕಟ್ಟೆ, ಬಿಟ್ಟಿ ನೆಡುವಿಲಂ,, ತೀರ್ಥರಾಮ ಹೊಸೋಳಿಕೆ, ವಿಶ್ವನಾಥ ಬಿಳಿಮಲೆ, ಮಾಧವ ಮೂಕಮಲೆ, ತೀರ್ಥರಾಮ ಹೊಸೋಳಿಕೆ, ಮತ್ತಿತರರು ಉಪಸ್ಥಿತರಿದ್ದರು.










