ಸಂಚಾರಕ್ಕೆ ಅಡಚಣೆ-ನಾಗರಿಕರಿಗೆ ಸಂಕಷ್ಟ -ಸಮಸ್ಯೆ ಬಗೆಹರಿಸುವಂತೆ ಮನವಿ
ಗಾಂಧಿನಗರದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಎರಡು ಬದಿಯಲ್ಲಿ ಖಾಸಗಿ ಟೂರಿಸ್ಟ್ ಬಸ್ ಗಳನ್ನು ನಿಲ್ಲಿಸಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಶಾಲಾ ಮಕ್ಕಳು ಹಾಗೂ ಇನ್ನಿತರ ಪ್ರವಾಸಿಗರ ವಾಹನಗಳನ್ನು ಊಟ ಉಪಹಾರಕ್ಕಾಗಿ ಹೋಟೆಲ್ ಮುಂದುಗಡೆ ನಿಲ್ಲಿಸಿ ಹೋಗುತ್ತಾರೆ. ಘನ ಗಾತ್ರದ ಬಸ್ ಗಳನ್ನು ಎರಡು ಬದಿ ನಿಲ್ಲಿಸಿದ್ದರಿಂದ ಉಳಿದ ವಾಹನ ಓಡಾಟಕ್ಕೆ ಸಮಸ್ಯೆ ಎದುರಾಗುತ್ತಿದೆ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ಟ್ರಾಫಿಕ್ ಜಾಮ್ ನಿಂದಾಗಿ ಸಮಯಕ್ಕೆ ಸರಿಯಾಗಿ ಮಕ್ಕಳನ್ನು ತಲುಪಿಸಲು ತೊಂದರೆಯಾಗುತ್ತಿದೆ ಎಂದು ಚಾಲಕರು ದೂರಿಕೊಂಡಿದ್ದಾರೆ.

























