ನಿಂತಿಕಲ್ಲು: ಶ್ರೀ ವನದುರ್ಗಾ ಸಾನಿಧ್ಯ ಸಂಪರ್ಕ ರಸ್ತೆ ಮತ್ತು ಆವರಣ ಇಂಟರ್‌ಲಾಕ್‌ ಗೆ ಗುದ್ದಲಿಪೂಜೆ

0

ನಿಂತಿಕಲ್ಲು ಇತಿಹಾಸ ಪ್ರಸಿದ್ಧ ಶ್ರೀ ವನದುರ್ಗಾ ಸಾನಿಧ್ಯವು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದು, ಅಭಿವೃದ್ಧಿ ಹೊಂದುವ ಸಮಯದಲ್ಲಿ ಶಾಸಕರ ವಿಶೇಷ ಅನುದಾನದಿಂದ ನಿಂತಿಕಲ್ಲಿನಿಂದ ಸಾನಿಧ್ಯ ತೆರಳುವ ರಸ್ತೆಗೆ ಇಂಟರ್‌ಲಾಕ್‌ ಹಾಕುವ ಸಲುವಾಗಿ ಶಾಸಕಿ ಭಾಗಿರಥಿ ಮುರುಳ್ಯರವರು ನ.18 ರಂದು ಗುದ್ದಲಿ ಪೂಜೆ ನೆರವೇರಿಸಿ ಹೆಚ್ಚಿನ ಅನುದಾನವನ್ನು ನೀಡುವ ಭರವಸೆ ನೀಡಿದರು.

ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ವನಿತಾ ಬಾಮೂಲೆ, ಜಾನಕಿ ಮುರುಳ್ಯ, ವಸಂತ ನಡುಬೈಲು ಕುಸುಮಾವತಿ ರೈ ಕೆಳಗಿನಗುತ್ತು, ರಾಜೇಂದ್ರ ಪ್ರಸಾದ್‌ ಶೆಟ್ಟಿ, ಅನೂಪ್‌ ಬಿಳಿಮಲೆ, ಮೋನಪ್ಪ ಅಲೇಕಿ, ರೂಪರಾಜ ರೈ, ಶಿವರಾಮ ಸಿ, ಸುಧಾರಾಣಿ, ಅಶೋಕ್‌ ಕುಮಾರ್‌ ರೈ ಉರುಸಾಗು, ನವ್ಯಶ್ರೀ ಅಲೆಂಗಾರ, ಮುತ್ತಪ್ಪ ಶಾಂತಿನಗರ, ಚಿದಾನಂದ ರೈ, ವಸಂತ ಹೇಮಳ, ದ್ರುವಕುಮಾರ ಕೇರ್ಪಡ, ವಾಣಿಜ್ಯ ಸಂಕಿರ್ಣದ ಮ್ಹಾಲಕರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ