ತಾಲೂಕು ಮಟ್ಟದ ಪುರುಷರ ಮತ್ತು ಯುವತಿಯರ ಕ್ರೀಡಾಕೂಟ – ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಮುಂಭಾಗದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನ. 16ರಂದು ನಡೆದ ತಾಲೂಕು ಮಟ್ಟದ ಕ್ರೀಡಾಕೂಟ 2025ರಲ್ಲಿ ಭಾಗವಹಿಸಿ ಪ್ರಥಮ ‌ಮತ್ತು ದ್ವಿತೀಯ ಸ್ಥಾನ ಪಡೆದ ಪುರುಷರು ಮತ್ತು ಯುವತಿಯರು ಡಿ.14 ರಂದು ಸುರತ್ಕಲ್ ನ ಗೋವಿಂದ ದಾಸ್ ಕಾಲೇಜು ಆವರಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ.

ತಾಲೂಕು ಮಟ್ಟದ ಫಲಿತಾಂಶ:

ಯುವತಿಯರ ಖೋಖೋ ಪಂದ್ಯಾಟದಲ್ಲಿ ನವಚೇತನ ಯುವತಿ ಮಂಡಲ ಪ್ರಥಮ, ಶೌರ್ಯ ಯುವತಿ ಮಂಡಲ ಪೈಲಾರು ದ್ವಿತೀಯ ಸ್ಥಾನ, ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಶ್ರೀ ವಿಷ್ಣು ಕ್ರೀಡಾ ಮತ್ತು ಕಲಾ ಸಂಘ ಕುಡೆಂಬಿ ಎ ಪ್ರಥಮ, ಶ್ರೀ ವಿಷ್ಣು ಕ್ರೀಡಾ ಮತ್ತು ಕಲಾ ಸಂಘ ಕುಡೆಂಬಿ ಬಿ ದ್ವಿತೀಯ, ಮಹಿಳೆಯರ ತ್ರೋಬಾಲ್ ನವಚೇತನ ಮಹಿಳಾ ಮಂಡಲ ಐವರ್ನಾಡು ಪ್ರಥಮ, ಶೌರ್ಯ ಯುವತಿ ಮಂಡಲ ಪೈಲಾರು ದ್ವಿತೀಯ, ಸ್ಪೂರ್ತಿ ಮಹಿಳಾ ಮಂಡಲ ಮರ್ಕಂಜ ತೃತೀಯ, ಮಹಿಳೆಯರ ಹಗ್ಗಜಗ್ಗಾಟದಲ್ಲಿ ನವಚೇತನ ಮಹಿಳಾ ಮಂಡಲ ಐವರ್ನಾಡು ಪ್ರಥಮ, ಸ್ಪೂರ್ತಿ ಮಹಿಳಾ ಮಂಡಲ ಮರ್ಕಂಜ ದ್ವಿತೀಯ, ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ವೈಯಕ್ತಿಕ ಸ್ಪರ್ಧೆಗಳಾದ ಯುವತಿಯರ 100 ಮೀಟರ್ ಓಟದಲ್ಲಿ ಕು. ಹಸ್ತ ಕಡಪಲ ಶೌರ್ಯ ಯುವತಿ ಮಂಡಲ ಪೈಲಾರು ಪ್ರಥಮ, ನಿಶಾ ಮಂಜುಶ್ರೀ ಯುವತಿ ಮಂಡಲ ಪಾಲೆಪ್ಪಾಡಿ ದ್ವಿತೀಯ ಮತ್ತು ಅಶ್ವಿತ ಮಂಜುಶ್ರೀ ಯುವತಿ ಮಂಡಲ ಪಾಲೆಪ್ಪಾಡಿ ತೃತೀಯ ಸ್ಥಾನ, ಶಾಟ್ ಪುಟ್ ಯುವತಿಯರ ವಿಭಾಗದಲ್ಲಿ ಭವಿತ ಮಂಜುಶ್ರೀ ಯುವತಿ ಮಂಡಲ ಐವರ್ನಾಡು ಪ್ರಥಮ, ದಿಶಾ ಎಸ್. ವರಲಕ್ಷ್ಮೀ ಯುವತಿ ಮಂಡಲ ಕೊಡಿಯಾಲಬೈಲು ಮತ್ತು ಶ್ರೀಲತಾ ಮಂಜುಶ್ರೀ ಯುವತಿ ಮಂಡಲ ಐವರ್ನಾಡು ಇವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪುರುಷರ 100 ಮೀ ಓಟದಲ್ಲಿ ಕುಡೆಂಬಿ ಶ್ರೀವಿಷ್ಣು ಕ್ರೀಡಾ ಮತ್ತು ಕಲಾ ಸಂಘದ ರಂಜಿತ್ ಪಿ.ಬಿ ಪ್ರಥಮ, ಜಟ್ಟಿಪಳ್ಳ ಕಪಿಲ ಯುವಕ ಮಂಡಲದ ವಿಪಿನ್ ಎಸ್ ದ್ವಿತೀಯ, ಧನುಷ್ ಕೆ.ಎಸ್ ಶ್ರೀ ವಿಷ್ಣು ಕ್ರೀಡಾ ಮತ್ತು ಕಲಾ‌ ಸಂಘ ಕುಡೆಂಬಿ ತೃತೀಯ, ಶಾಟ್ ಪುಟ್ ಪುರುಷರ ವಿಭಾಗದಲ್ಲಿ ಪ್ರಥಮ ಲೋಹಿತ್ ಬಾಳಿಕಳ, ಯುವಕ‌ ಮಂಡಲ ಮಡಪ್ಪಾಡಿ ದ್ವಿತೀಯ ಸ್ಥಾನವನ್ನು ಕೊಡಿಯಾಲಬೈಲಿನ ವಿಷ್ಣು ಯುವಕ‌ಮಂಡಲದ ಗೋಪಾಲಕೃಷ್ಣ ಮತ್ತು ತೃತೀಯ ಸ್ಥಾನವನ್ನು ಸಂದೀಪ್ ಕೆ ಶ್ರೀ ವಿಷ್ಣು ಕ್ರೀಡಾ ಮತ್ತು ಕಲಾ ಸಂಘ ಕುಡೆಂಬಿ ಇವರು ಪಡೆದುಕೊಂಡಿದ್ದಾರೆ. ಮಹಿಳಾ ವಿಭಾಗದ ಶಾಟ್ ಪುಟ್ ನಲ್ಲಿ ಐವರ್ನಾಡು ನವಚೇತನ ಮಹಿಳಾ ಮಂಡಲದ ಕೀರ್ತನ ಪ್ರಥಮ,
ದ್ವಿತೀಯ ಆಶಾ ವೈ, ಸ್ಪೂರ್ತಿ ಮಹಿಳಾ ಮಂಡಲ ಮರ್ಕಂಜ ಮತ್ತು ತೃತೀಯ ಸ್ಥಾನವನ್ನು ಐವರ್ನಾಡು ನವಚೇತನ ಮಹಿಳಾ ಮಂಡಲದ ರೇಷ್ಮಾ ಪಡೆದಿದ್ದಾರೆ. ಮಹಿಳೆಯರ ಸ್ಲೋ ಬೈಕ್ ರೇಸ್ ನಲ್ಲಿ ಪ್ರಥಮ ಚೊಕ್ಕಾಡಿಯ ಮಯೂರಿ ಯುವತಿ ಮಂಡಲ ಸ್ವಾತಿ ಪಡ್ಪು, ದ್ವಿತೀಯ ಸ್ಥಾನವನ್ನು ಕುಂಚಡ್ಕ ಕಸ್ತೂರ್ಬಾ ಮಹಿಳಾ ಮಂಡಲ ಆಲೆಟ್ಟಿ ಇದರ ಸದಸ್ಯೆ ಪೂರ್ಣಿಮಾ ಮತ್ತು ತೃತೀಯ ಸ್ಥಾನವನ್ನು ಪಂಜ ವನಿತಾ ಮಹಿಳಾ ಮಂಡಲದ ಸುಮಾ ಕುದ್ವ ಪಡೆದಿದ್ದಾರೆ.