ಅಧ್ಯಕ್ಷ- ವಿಶ್ವನಾಥ ಮೇಲೆ ಪೆರುಮುಂಡ,ಕಾರ್ಯದರ್ಶಿ – ಸನತ್ ಚಳ್ಳಂಗಾರ್,
ಕೋಶಾಧಿಕಾರಿ – ಉದಯ ಕಿರಣ ಗುತ್ತಿನಡ್ಕ
ಬಡ್ಡಡ್ಕ ಕಲ್ಲಪಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ವಾರ್ಷಿಕ ಮಹಾಸಭೆಯು ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ಬಡ್ಡಡ್ಕ ರವರ ಅಧ್ಯಕ್ಷ ತೆಯಲ್ಲಿ ಅಯ್ಯಪ್ಪ ಭಜನಾ ಮಂದಿರದಲ್ಲಿ ನ. 16 ರಂದು ನಡೆಯಿತು.















ಈ ಸಂದರ್ಭದಲ್ಲಿ ಕಳೆದ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಕಾರ್ಯದರ್ಶಿ ದಯಾನಂದ ಪತ್ತುಕುಂಜ ರವರು ಮಂಡಿಸಿದರು.
ಮುಂದಿನ 2025 -26
ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ
ಡಾ. ಎನ್. ಎ. ಜಯದೀಪ್ ಬಡ್ಡಡ್ಕ, ಅಧ್ಯಕ್ಷ ವಿಶ್ವನಾಥ ಮೇಲೆ ಪೆರುಮುಂಡ, ಕಾರ್ಯದರ್ಶಿ ಸನತ್ ಚಳ್ಳಂಗಾರ್, ಕೋಶಾಧಿಕಾರಿ ಉದಯಕಿರಣ ಗುತ್ತಿನಡ್ಕ, ಉಪಾಧ್ಯಕ್ಷ ಚಂದ್ರಶೇಖರ ಗುಂಡ್ಯ ಬಡ್ಡಡ್ಕ,ಜತೆ ಕಾರ್ಯದರ್ಶಿ ರವಿ ಕುಮಾರ್ ಪೆರುಮುಂಡ
ಸದಸ್ಯರುಗಳಾಗಿ ಶಶಿಧರ ತಿಮ್ಮನಮೂಲೆ, ತೀರ್ಥ ಪ್ರಸಾದ್ ರಂಗತ್ತಮಲೆ, ನವೀನ್ ಕುಮಾರ್ ಗೂಡಿಂಜ, ಅರುಣ ಕುಮಾರ್ ಕೂರ್ನಡ್ಕ, ಸಂದೀಪ್ ಗುಂಡ್ಯ, ಶ್ರೀಮತಿ ಲಕ್ಷ್ಮೀ ಚೆಟ್ಟಿಯಾರ್ ಬಡ್ಡಡ್ಕ ರವರನ್ನು ಆಯ್ಕೆ ಮಾಡಲಾಯಿತು.










