ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ” ಜಾಗೃತಿ -ಪ್ರಗತಿ ಪಥ” ಸ್ಮರಣ ಸಂಚಿಕೆಯ ವಿತರಣಾ ಸಮಾರಂಭ

0

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪಿ. ಸಿ. ಜಯರಾಮರಿಗೆ ಸನ್ಮಾನ

ಮಂಜುನಾಥೇಶ್ವರ ಭಜನಾ ಪರಿಷತ್ ತ್ರೈಮಾಸಿಕ ಸಭೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ, ಜನಜಾಗೃತಿ ವೇದಿಕೆ ಟ್ರಸ್ಟ್ ಇದರ ವತಿಯಿಂದ ಹೊರತಂದಿರುವ “ಜಾಗೃತಿ-ಪ್ರಗತಿ ಪಥ ” ಎಂಬ ಸ್ಮರಣ ಸಂಚಿಕೆಯ ವಿತರಣಾ ಕಾರ್ಯಕ್ರಮ
ನ. 21 ರಂದು ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು.


ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್ ಅಧ್ಯಕ್ಷತೆ ವಹಿಸಿ, ಸ್ಮರಣ ಸಂಚಿಕೆಯ ಸಂಪಾದಕ ನೆಲೆಯಲ್ಲಿ ಮಾತನಾಡಿ ” ಕ್ಷೇತ್ರದ ಮೇಲೆ ಬಂದಿರುವ ಅಪಪ್ರಚಾರಕ್ಕೆ ಉತ್ತರವಾಗಿ ಸಂಚಿಕೆ ಮೂಡಿ ಬಂದಿದೆ. ಕ್ಷೇತ್ರದ ಸಮಾಜಮುಖಿ ಚಿಂತನೆಯ ಕುರಿತು ಸಮಗ್ರ ಪಾರದರ್ಶಕ ಮಾಹಿತಿಗಳು ಹಲವಾರು ಮಂದಿ ಲೇಖಕರ ಲೇಖನವುಮುದ್ರಣಗೊಂಡು ದಾಖಲುಗೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ
ವೇದಿಕೆಯ ಮಾಜಿ ಅಧ್ಯಕ್ಷ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪಿ. ಸಿ ಜಯರಾಮ ರವರನ್ನು
ಗೌರವಿಸಿ
ಸನ್ಮಾನಿಸಲಾಯಿತು.

ಜನ ಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ
ಭವಾನಿಶಂಕರ ಅಡ್ತಲೆ, ಶ್ರೀಮತಿ ವಿಮಲಾ ರಂಗಯ್ಯ,
ಮಹೇಶ್ ಕುಮಾರ್ ರೈ ಮೇನಾಲ, ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ,ಭಜನಾ ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ, ಸಂಪಾದಕ ಮಂಡಳಿಯ ಸದಸ್ಯರಾದ ಪದ್ಮನಾಭ ಜೈನ್, ಭಾಸ್ಕರ ಅಡ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಸವಿತ ಸಂದೇಶ್ ಪ್ರಾರ್ಥಿಸಿದರು. ಯೋಜನಾಧಿಕಾರಿ
ಮಾಧವ ಗೌಡ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ,ವಂದಿಸಿದರು.
ಜನಜಾಗೃತಿ ವೇದಿಕೆಯ ಸದಸ್ಯರು, ಒಕ್ಕೂಟದ ಸದಸ್ಯರು, ಭಜನಾ ಪರಿಷತ್ ಪದಾಧಿಕಾರಿಗಳು, ಮೇಲ್ವಿಚಾರಕರು,
ಸೇವಾ ಪ್ರತಿನಿಧಿಗಳು ಭಾಗವಹಿಸಿದರು.