ಸುಬ್ರಹ್ಮಣ್ಯ: ಬ್ರಹ್ಮರಥದಲ್ಲಿರುವ ಸುಬ್ರಹ್ಮಣ್ಯ ಮತ್ತು ಶ್ರೀ ಗಣಪತಿ ದೇವರ ವಿಗ್ರಹಕ್ಕೆ ಬೆಳ್ಳಿಯ ಪ್ರಭಾವಳಿ ಕೊಡುಗೆ

0

ಬ್ರಹ್ಮರಥದ ದಾನಿಗಳಾದ ಅಜಿತ್ ಶೆಟ್ಟಿ ಕಡಬ ಮತ್ತು ಅವರ ಮನೆಯವರು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಬ್ರಹ್ಮರಥದಲ್ಲಿರುವ ಕುಕ್ಕೆಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಗಣಪತಿ ದೇವರ ವಿಗ್ರಹಕ್ಕೆ 13 ಲಕ್ಷಕ್ಕೂ ಅಧಿಕ ಮೌಲ್ಯದ ಸುಮಾರು 7.5 ಕೆಜಿ ಬೆಳ್ಳಿಯ ಪ್ರಭಾವಳಿಯನ್ನು ಕೊಡುಗೆಯಾಗಿ ನ.23 ರಂದು ಹಸ್ತಾಂತರಿಸಿದ್ದಾರೆ.‌

ಈ ಸಂದರ್ಭ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯ ವ್ಯವಸ್ಥಾಪನಾ ಸಮಿತಿಯ ಸದಸ್ಯ ಅಶೋಕ್ ನೆಕ್ರಾಜೆ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ,, ಸುಬ್ರಹ್ಮಣ್ಯ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಪ್ರೋಟೋಕಾಲ್ ಅಧಿಕಾರ ಜಯರಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.