ಮತ್ತೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ನಾಲ್ಕನೇ ಬಾರಿಗೆ ಅವಿರೋಧ ಆಯ್ಕೆ

0

ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ತಂಡದ ಅಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದರು ಪ್ರತಿಷ್ಠಿತ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಅವಿಶ್ವಾಸ ಮಂಡನೆಯಾಗಿ ಕೆಂಚಪ್ಪ ಗೌಡರ ನೇತೃತ್ವದ ಇಡೀ ತಂಡ ಅಧಿಕಾರ ನಷ್ಟ ಅನುಭವಿಸಿತ್ತು. ಹೊಸ ಪದಾಧಿಕಾರಿಗಳ ಆಯ್ಕೆಗೆ ನ.23 ರಂದು ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಎಲ್.ಶ್ರೀನಿವಾಸ್ ನೂತನ ಅಧ್ಯಕ್ಷರಾಗಿ, ಪ್ರಥಮ ಉಪಾಧ್ಯಕ್ಷರಾಗಿ ಡಾ.ರೇಣುಕಾಪ್ರಸಾದ್ ಕೆ.ವಿ., ದ್ವಿತೀಯ ಉಪಾಧ್ಯಕ್ಷರಾಗಿ ಎಂ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಸಿ.ಜಿ., ಸಹ ಕಾರ್ಯದರ್ಶಿಯಾಗಿ ಡಿ.ಕೆ.ರಮೇಶ್, ಕೋಶಾಧಿಕಾರಿಯಾಗಿ ಕೆ.ವಿ.ಶ್ರೀಧರ್ ಆಯ್ಕೆಯಾದರು.

ಡಾ.ಕೆ.ವಿ.ರೇಣುಕಾಪ್ರಸಾದರು ನಾಲ್ಕನೇ ಬಾರಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.