ಅಲೆಟ್ಟಿ ಗ್ರಾಮದ ತಲೆಪಳ ರಂಗತ್ತಮಲೆಯ ರಾಜೀವ ನಾಯ್ಕ್ ಎಂಬವರ ಪುತ್ರ ಶ್ರೀರಾಮ್ ಎಂಬ ಯುವಕನಿಗೆ ಸೊಂಟದಿಂದ ಕೆಳಭಾಗ ಬಲಹೀನಗೊಂಡು ನಡೆದಾಡಲು ಸಾಧ್ಯವಿಲ್ಲದ ಚಿಂತಾಜನಕ ಸ್ಥಿತಿಗೆ ತಲುಪಿದ್ದು ಚಿಕಿತ್ಸೆಗಾಗಿ ಇದೀಗ ಮಂಗಳೂರಿನ
ಕೆ. ಎಂ. ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಗಾಗಲೇ ಸುಮಾರು 4 ಲಕ್ಷಕ್ಕೂ ಮಿಕ್ಕಿ ಚಿಕಿತ್ಸೆಗೆಂದು ಖರ್ಚು ತಗುಲಿದ್ದು, ಬಲ ಕಳೆದುಕೊಂಡ ಕಾಲುಗಳು ನಿಶ್ಯಕ್ತಿಯಲ್ಲಿದೆ.
ಮುಂದಿನ ಚಿಕೆತ್ಸೆಗೆ ಇನ್ನೂ ಸುಮಾರು 6 ಲಕ್ಷಕ್ಕೂ ಮಿಕ್ಕಿ ಖರ್ಚು ತಗುಲಬಹುದೆಂದು ವೈದ್ಯರು ತಿಳಿಸಿರುತ್ತಾರೆ. ಕೂಲಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದ ಬಡ ಕುಟುಂಬದ ಯುವಕ ತನ್ನ ಕಾಲಿನ ಆಧಾರ ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ,
ಇತ್ತ ಮನೆಗೆ ಆಧಾರ ಸ್ಥಂಭವಿಲ್ಲದಂತಾಗಿ ಕುಟುಂಬ ಚಿಂತಾಜನಕ ಸ್ಥಿತಿಯಲ್ಲಿದೆ. ಆದ್ದರಿಂದ ದಯಾಮಯರಾದ ಸಹೃದಯಿಗಳು ಯುವಕನ ಚಿಕಿತ್ಸೆಗೆನೆರವಿನ ಹಸ್ತ ಚಾಚುವ ಮೂಲಕ ಕುಟುಂಬಕ್ಕೆ ಆಧಾರವಾಗಬೇಕಾಗಿದೆ.















ಸಹಾಯಧನ ನೀಡಬೇಕಾದ ಖಾತೆಯ ವಿವರ:
ಜಯರಾಮ ನಾಯ್ಕ್ ಕೆ.ಡಿ ಅಕೌಂಟ್ ನಂ: 599102010001532
IFSC:UBIN 0559911
ಮೊ: 9223008586










