ಎನ್. ಎಂ. ಸಿ ಯಲ್ಲಿ ಅರೆಭಾಷೆ “ಅಪ್ಪ “ನಾಟಕದ ಪ್ರಥಮ ರಂಗ ಪ್ರದರ್ಶನದ ಉದ್ಘಾಟನಾ ಸಮಾರಂಭ

0

ಅರೆಭಾಷೆಯ ಕಂಪು ಪಸರಿಸಲು ಹಾಗೂ ಭಾಷೆ ಯ ಬೆಳವಣಿಗೆಗೆ ನಾಟಕ ಪ್ರದರ್ಶನಪೂರಕವಾಗಿರುವುದು. ಅಪ್ಪ ನಾಟಕ ಪ್ರದರ್ಶನ ಶತ ಪ್ರಯೋಗ ಕಾಣುವಂತಾಗಲಿ – ಡಾ. ಕೆ. ವಿ. ಚಿದಾನಂದ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರವತಿಯಿಂದ ಆಯೋಜಿಸಲ್ಪಟ್ಟ ಅರೆಭಾಷೆ “ಅಪ್ಪ “ನಾಟಕದ ಪ್ರಥಮ ರಂಗ ಪ್ರದರ್ಶನದ ಉದ್ಘಾಟನಾ ಸಮಾರಂಭವು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಸಭಾಂಗಣದಲ್ಲಿ ನ. 27 ರಂದು ನಡೆಯಿತು.

ಅಕಾಡೆಮಿಯ ಅಧ್ಯಕ್ಷ
ಸದಾನಂದ ಮಾವಜಿ ಯವರು ಅಧ್ಯಕ್ಷತೆ ವಹಿಸಿ ಮಾತನಾಡಿ “ಈ ಬಾರಿ ಅಕಾಡೆಮಿ ವತಿಯಿಂದ ನಡೆಯುವ ಗೌರವ ಪ್ರಶಸ್ತಿ ಪ್ರದಾನ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ.ಅರೆಭಾಷೆಯ ಉಳಿವಿಗಾಗಿಬೆಳವಣಿಗೆಗಾಗಿ ಅರೆಭಾಷೆ ನಾಟಕವನ್ನು ಜೋಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ
ಡಾ. ಕೆ. ವಿ. ಚಿದಾನಂದ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ರಂಗಕರ್ಮಿ ದೈಹಿಕ ಶಿಕ್ಷಣ ಶಿಕ್ಷಕ ತುಕರಾಮ ಏನೆಕಲ್ಲು ಡೋಲು ಬಾರಿಸಿ ಚಾಲನೆ ನೀಡಿದರು. ರಂಗಕರ್ಮಿ
ಬಾಸುಮ ಕೊಡಗು,
ಎನ್. ಎಂ. ಸಿ
ಪ್ರಾಂಶುಪಾಲರಾದ ರುದ್ರಕುಮಾರ್, ರಂಗ ನಿರ್ದೇಶಕ ಲೋಕೇಶ್ ಊರುಬೈಲು ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯ ವಿನೋದ್ ಮೂಡುಗದ್ದೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ, ಲೋಕೇಶ್ ಊರುಬೈಲು
ವಂದಿಸಿದರು.
ಕ. ಸಾ. ಪ ಅಧ್ಯಕ್ಷ
ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ರವರ ನಿರ್ದೇಶನದ
ಅರೆಭಾಷೆ ಅಪ್ಪ ನಾಟಕದ ಪ್ರಥಮ ಪ್ರದರ್ಶನ ವಾಯಿತು.