ದೇವರಕಾನ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ನಂದಿನಿ ಯವರಿಗೆ ಗೌರವಾರ್ಪಣೆ

0

ದೇವರಕಾನ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಯಾಗಿಯೂ ಸೇವೆ ಸೇವೆ ಸಲ್ಲಿಸಿದ ನಂದಿನಿ ಆರಿಕಲ್ಲು ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನ.25ರಂದು ಪರ್ಲಿಕಜೆ ಅಂಗನವಾಡಿ ಕೇಂದ್ರದಲ್ಲಿ ಜರುಗಿತು.

ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ರಾಜೇಶ್ವರಿ ಎಂ, ಶ್ರೀಮತಿ ರೋಹಿತಾಕ್ಷಿ, ಶ್ರೀಮತಿ ರಾಜೇಶ್ವರಿ, ಶ್ರೀಮತಿ ಶಿವಶಾಂತಿ, ಶ್ರೀಮತಿ ಜಯಶೀಲ, ಶ್ರೀಮತಿ ಭಾರತಿ ಸಹಾಯಕಿಯರಾದ ಶ್ರೀಮತಿ ಶ್ಯಾಮಲಾ, ಶ್ರೀಮತಿ ಕುಮಾರಿ, ಶ್ರೀಮತಿ ಪ್ರೇಮ, ಶ್ರೀಮತಿ ದೀಪಿಕಾ, ಶ್ರೀಮತಿ ದಿವ್ಯಾ, ಶ್ರೀಮತಿ ಲೀಲಾವತಿ ಉಪಸ್ಥಿತರಿದ್ದರು.