ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ (ಒಇಂ)ಪದಾಧಿಕಾರಿಗಳ ಪದಗ್ರಹಣ

0
 ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ ಒಇಂ ದ ಉದ್ಘಾಟಣಾ ಸಮಾರಂಭ ದಿನಾಂಕ ೦೧-೧೨-೨೦೨೫ರಂದು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀ ಗೋಪಾಲಕೃಷ್ಣ ಎನ್. ಅಸಿಸ್ಟೆಂಟ್ ಫ್ಯಾಕ್ಟರಿ ಮ್ಯಾನೇಜರ್, ಕೆ.ಎಫ್.ಡಿ.ಸಿ., ಸುಳ್ಯ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೌಂಡೇಶನ್ ಇಂಜಿನಿಯರಿಂಗ್, ಮುಂದೆ ಅದಕ್ಕೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು ವಹಿಸಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ. ರಾಘವೇಂದ್ರ ಬಿ. ಕಾಮತ್ ಮೆಕ್ಯಾನಿಕಲ್ ಅಸೋಸಿಯೇಶನ್ ಬಗ್ಗೆ ವಿವರಿಸಿದರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹರ್ಷ ಕುಮಾರ್ ಬಿ, ವಿಭಾಗದ ಅಸೋಸಿಯೇಶನ್ (ಒಇಂ) ಬಗ್ಗೆ ವಿವರಿಸಿದರು. ಅಸೋಸಿಯೇಶನ್ ಸಂಯೋಜಕರಾದ ಡಾ. ಸುನಿಲ್ ಕುಮಾರ್ ಎಂ., ಪ್ರೊ. ಸುಧೀರ್ ಕೆ.ವಿ ಮತ್ತು ಪ್ರೊ. ಅಭಿಜ್ಞ ಬಿ.ಬಿ. ಕಾರ್ಯಕ್ರಮವನ್ನು ಸಂಯೋಜಿಸಿದರು. ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಖಿಲೇಷ್ ಪಿ. ಸ್ವಾಗತಿಸಿ, ಪುನೀತ್ ಪ್ರಾರ್ಥಿಸಿದರು. ಪೃಥ್ವಿರಾಜ್ ಯು.ಎಂ. ವಂದಿಸಿದರು. ನಿಶಾ ಜೆ.ಪಿ. ಮತ್ತು ಜೀವಿತ ಕಾರ್ಯಕ್ರಮ ನಿರೂಪಿಸಿದರು.