ಸುಳ್ಯ ರೋಟರಿ ಕ್ಲಬ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ರಕ್ತದಾನ ಶಿಬಿರ

0

ಸುಳ್ಯ ರೋಟರಿ ಕ್ಲಬ್,ರೋಟರಿ ಕ್ಲಬ್‌ ಸುಳ್ಯ ಸಿಟಿ, ಇನ್ನರ್‌ವೀಲ್ ಕ್ಲಬ್, ಸುಳ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಸುಳ್ಯ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಎನ್ ಎಸ್ ಎಸ್ ರೆಡ್ ರಿಬ್ಬನ್ ಕ್ಲಬ್ ಎನ್.ಎಂ.ಸಿ. ಸುಳ್ಯ ಪುತ್ತೂರು ರೋಟರಿ ಕ್ಯಾಂಪ್ಲೋ ಬ್ಲಡ್ ಸೆಂಟರ್ ಇದರ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಸುಳ್ಯ ರೋಟರಿ ಸಭಾಭವನದಲ್ಲಿ ಡಿ 1 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ. ಡಾ. ರಾಮ್‌ಮೋಹನ್ ಕೆ.ಎನ್.ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕು ಸಭಾಪತಿ ಪಿ ಬಿ ಸುಧಾಕರ್ ರೈ ರವರು ನೆರವೇರಿಸಿದರು.
ಪುತ್ತೂರು ರೋಟರಿ ಕ್ಯಾಂಸ್ಕೋ ಬ್ಲಡ್ ಸೆಂಟರ್ ಇದರ ವೈದ್ಯಾಧಿಕಾರಿ ರೋ ಡಾ. ರಾಮಕೃಷ್ಣರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ಅಧ್ಯಕ್ಷರಾದ ರೋ ಹೇಮಂತ್ ಕಾಮತ್,ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ರೊ.ಡಾ.ಸವಿತಾ ಹೊದ್ದೆಟ್ಟಿ,ಸುಳ್ಯ ಯುವ ಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತಡ್ಕ,ರೊ. ಸಂಜೀವ ಕುದ್ದಾಜೆ ಅಧ್ಯಕ್ಷರು ಯುವ ರೆಡ್ ಕ್ರಾಸ್ ಸಂಸ್ಥೆ, ಸುಳ್ಯ, ಕಾರ್ಯಧರ್ಶಿ ರೊ. ಸುಹಾಸ್ ಪಿ.ಜಿ.,ಡಾ. ಪ್ರಜ್ಞಾ.ಎಂ.ಆರ್.ಇನ್ನರ್‌ ವೀಲ್ ಕ್ಲಬ್‌ ಕಾರ್ಯದರ್ಶಿ ಹಾಗೂ ಶ್ರೀಮತಿ ಚಿತ್ರಲೇಖ ಕೆ.ಎಸ್‌., ಹರಿಪ್ರಸಾದ್ ಎ.ವಿ.,ರೋ ಭಾಸ್ಕರ್ ಎಂ ಆರ್ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸಂತೋಷ್ ಬಿ ಪಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು 40ಕ್ಕೂ ಮಂದಿ ಸದಸ್ಯರುಗಳು ರಕ್ತದಾನ ಮಾಡುವ ಮೂಲಕ ಶಿಬಿರದಲ್ಲಿ ಭಾಗವಹಿಸಿದರು.