ಬದ್ರಿಯಾ ಜುಮಾ ಮಸೀದಿ ಕಜೆ ನಿಂತಿಕಲ್ಲು ಇದರ ಅಂಗ ಸಂಸ್ಥೆಯಾದ ಯುನೈಟೆಡ್ ಯೂತ್ ಕೌನ್ಸಿಲ್ ಕಜೆ ನಿಂತಿ ಕಲ್ಲು ಇವರ ವತಿಯಿಂದ ಹಾಗೂ ಭಾರತೀಯ ರೆಡ್ ಕ್ರಾಸ್ ಸುಳ್ಯ ಹಾಗೂ ಮಂಗಳೂರು ಇವರ ಸಾರಥ್ಯದಲ್ಲಿ ಬ್ಲಡ್ ಕ್ಯಾಂಪ್ ಹಾಗೂ ಮೆಡ್ ಲ್ಯಾಂಡ್ ಮಲ್ಟಿ ಸ್ಪಾಸಾಲಿಟಿ ಹಾಸ್ಪಿಟಲ್ ಪುತ್ತೂರು ಇವರ ಸಾರಥ್ಯದಲ್ಲಿ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ನ. 30 ರಂದು ನಿಂತಿಕಲ್ಲು- ಕಜೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು ಜಾಫರ್ ಸಹದಿ ಪಲ್ಲತ್ತೂರು ಉದ್ಘಾಟಿಸಿದರು. ATOZ(ಯು ವೈ ಸಿ ಅಧ್ಯಕ್ಷ) ಮುಸ್ತಾಫಾ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಕೆಜೆ ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಗಫೂರ್ ಪಾಲ್ಗೊಂಡಿದ್ದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಭಾಪತಿ
ಸುಧಾಕರ ರೈ ಅರಂತೋಡು, ಮೆಡ್ ಲ್ಯಾಂಡ್ ಹಾಸ್ಪಿಟಲ್ ಲ್ಯಾಬೋರೇಟರಿ ಅಬ್ದುಲ್ ರಝಾಕ್, ಎಣ್ಮೂರು -ಐವತ್ತೊಕ್ಲು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸದಸ್ಯ ಲೋಕೇಶ್ ಆಕ್ರಿಕಟ್ಟೆ , ಸಾಮಾಜಿಕ ಕಾರ್ಯಕರ್ತ ಜಮಾಲ್ ಪಡ್ಡಿನಂಗಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.















ಕಾರ್ಯಕ್ರಮದಲ್ಲಿ ರಝಾಕ್ ಎ ಯಂ ಸ್ವಾಗತಿಸಿದರು.ಶರೀಫ್ ಜಿ ವಂದಿಸಿದರು.










