ದ. 9 ರಂದು ಅರಂತೋಡಿನಲ್ಲಿ ಪ. ಜಾತಿ ಮೀನು ಕೃಷಿಕರಿಗೆ ತರಬೇತಿ

0

ಮೀನುಗಾರಿಕೆಯಲ್ಲಿ ಆಸಕ್ತಿ ಇರುವ ಪರಿಶಿಷ್ಟ ಜಾತಿಯ ಪುರುಷ / ಮಹಿಳೆಯರಿಗೆ ಮೀನುಗಾರಿಕೆ ಕುರಿತು ಒಂದು ದಿನದ ತರಬೇತಿ ಮೀನುಗಾರಿಕೆ ಇಲಾಖೆ ವತಿಯಿಂದ ಅರಂತೋಡು ಗ್ರಾಮ ಪಂಚಾಯತ್ ಸಹಯೋಗದಲ್ಲಿ ದ. 09 ರಂದು ನಡೆಯಲಿದೆ.

ಒಟ್ಟು 30 ಜನರಿಗೆ ಮಾತ್ರ ಅವಕಾಶ ಇರುತ್ತದೆ. ಆರಂತೋಡು ಪಂಚಾಯತ್ ಸಭಾಭವನದಲ್ಲಿ
ಬೆಳಿಗ್ಗೆ 9.00 ಗಂಟೆಗೆ ತರಬೇತಿ ಆರಂಭಗೊಳ್ಳಲಿದೆ. ಭಾಗವಹಿಸಿದವರಿಗೆ ಮೀನುಗಾರಿಕೆ ಇಲಾಖೆ ಯಿಂದ ಪ್ರಮಾಣ ಪತ್ರ, ತರಬೇತಿ ಭತ್ಯೆ ನೀಡಲಾಗುತ್ತದೆ.
ತರಬೇತಿಗೆ ಬರುವಾಗ ಆಧಾರ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ತರಬೇಕಿದೆ. ಆಸಕ್ತರು ಮೊಬೈಲ್ ಸಂಖ್ಯೆ 9480147315 ಇದಕ್ಕೆ ಹೆಸರು, ಗ್ರಾಮ, ಮೊಬೈಲ್ ಸಂಖ್ಯೆಯೊಂದಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.