ಸಿಬ್ಬಂದಿಯನ್ನು ಅಮಾನತುಗೊಳಿಸಿದ ಆಡಳಿತ
ಪಂಜ ಗ್ರಾಮ ಪಂಚಾಯತ್ ನಲ್ಲಿ ತೆರಿಗೆ ವಸೂಲಾತಿಯ ಹಣ ಬ್ಯಾಂಕ್ ಗೆ ಪಾವತಿಸದೇ ದುರುಪಯೋಗ ಮಾಡಿರುವ ಆರೋಪದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ಬಾಬು ಎಂಬವರನ್ನು ಗ್ರಾ.ಪಂ. ಆಡಳಿತ ಅಮಾನತು ಗೊಳಿಸಿರುವುದಾಗಿ ತಿಳಿದುಬಂದಿದೆ.















ಪಂಚಾಯತ್ ಸಿಬ್ಬಂದಿ ಆಗಿರುವ ಬಾಬು ಎಂಬವರು ತಾವು ಸಂಗ್ರಹಿಸಿದ ತೆರಿಗೆ ಹಣವನ್ನು ಬ್ಯಾಂಕ್ ಗೆ ಪಾವತಿಸದೇ ದುರುಪಯೋಗ ಮಾಡಿರುವುದಾಗಿಯೂ, ಈ ವಿಚಾರ ಪಂಚಾಯತ್ ಆಡಳಿತ ಹಾಗೂ ಪಿಡಿಒಗಮನಕ್ಕೆ ಬಂದು ಬಾಬುರವರನ್ನು ವಿಚಾರಿಸಿದಾಗ ಹಣ ದುರುಪಯೋಗವನ್ನು ಒಪ್ಪಿಕೊಂಡರೆನ್ನಲಾಗಿದೆ.
ಡಿ.2ರಂದು ಪಂಚಾಯತ್ ಆಡಳಿತ ಬಾಬುರನ್ನು ಅಮಾನತು ಮಾಡಿರುವುದಾಗಿಯೂ, ಹಾಗೂ ಹಣ ದುರುಪಯೋಗದ ಕುರಿತು ಪೋಲೀಸ್ ದೂರುನೀಡಿರುವುದಾಗಿಯೂ ತಿಳಿದುಬಂದಿದೆ.










