ಹಳೆಗೇಟು ನಿವಾಸಿ ಶ್ರೀ ದುರ್ಗಾ ಸೌಂಡ್ಸ್ ಮಾಲಕ ರಕ್ಷಿತ್ ಸೆಂಡಾರ್ಕರ್ ನಿಧನ

0

ಸುಳ್ಯ ಹಳೆಗೇಟು ನಿವಾಸಿ ಶ್ರೀ ದುರ್ಗಾ ಸೌಂಡ್ ಮತ್ತು ಲೈಟಿಂಗ್ ಸಂಸ್ಥೆಯ ಮಾಲಕ ರಕ್ಷಿತ್ ಸೆಂಡಾರ್ಕರ್ 40 ವರ್ಷ ಅವರು ಅಲ್ಪಕಾಲದ ಅಸೌಖ್ಯ ದಿಂದ ಡಿ 3 ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ತಾಯಿ, ಪತ್ನಿ ಹಾಗೂ ಮಗುವನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.