ಸುಳ್ಯ ತಾಲೂಕು ರಚನೆಯಾಗಿ 60 ವರ್ಷಷಷ್ಟ್ಯಬ್ಧ ಆಚರಣೆ ಸಮಾಲೋಚನೆಗಾಗಿ ನಾಳೆ ಸಭೆ

0

ಇಲಾಖಾಧಿಕಾರಿಗಳು ಮತ್ತು ಸಂಘಸಂಸ್ಥೆಗಳನ್ನು ಕರೆಯಲು ಶಾಸಕರ ಸೂಚನೆ

ಸುಳ್ಯ ತಾಲೂಕು ರಚನೆಯಾಗಿ ಇದೇ ತಿಂಗಳು 60 ವರ್ಷ ತುಂಬುತ್ತಿರುವುದರಿಂದ ಷಷ್ಟ್ಯಬ್ಧದ ಪ್ರಯುಕ್ತ ಭವ್ಯ ಸುಳ್ಯ ಸಂಕಲ್ಪ ಕಾರ್ಯಕ್ರಮ ಮಾಡುವ ಬಗ್ಗೆ ಸಮಾಲೋಚನೆಗಾಗಿ ಶಾಸಕರು ನಾಳೆ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಂಘಸಂಸ್ಥೆಗಳ ಸಭೆ ಕರೆದಿದ್ದಾರೆ.

ಸುಳ್ಯ ತಾಲೂಕು ರಚನೆಗಾಗಿ ಪ್ರಯತ್ನಿಸಿದವರಲ್ಲಿ ಪ್ರಮುಖರಾದ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮದಿನವಾದ ಡಿ.26 ರಂದು ಈ ಕಾರ್ಯಕ್ರಮ ಮಾಡುವ ಯೋಚನೆ ಇದ್ದು , ನಾಳೆ ದ.5 ರಂದು ಸಂಜೆ 4 ಗಂಟೆಗೆ ತಾಲೂಕು ಪಂಚಾಯತ್ ನಲ್ಲಿ ಮೀಟಿಂಗ್ ಕರೆಯುವಂತೆ ತಹಶೀಲ್ದಾರ್ ಮಂಜುಳ ಮತ್ತು ತಾ.ಪಂ. ಇ.ಒ. ರಾಜಣ್ಣರಿಗೆ ಶಾಸಕಿ ಕು.ಭಾಗೀರಥಿ ಮುರುಳ್ಯರವರು ಇಂದು ಸೂಚನೆ ನೀಡಿದರು.
ಇಂದು ತಾ.ಪಂ.ಕಚೇರಿಯ ತನ್ನ ಕಚೇರಿಗೆ ತಹಶೀಲ್ದಾರ್ ಮತ್ತು ತಾ.ಪಂ. ಇ.ಒ. ರನ್ನು ಕರೆಸಿಕೊಂಡು ಈ ಬಗ್ಗೆ ಶಾಸಕರು ಸಮಾಲೋಚಿಸಿದರು.