ಸುಳ್ಯ ಆಸ್ಪತ್ರೆಗೆ ದಾಖಲು
ಆತ್ಮಹತ್ಯೆಗೆ ಪ್ರಯತ್ನಿಸಿ ನೇಣು ಬಿಗಿದು ಜಿಗಿದ ವ್ಯಕ್ತಿಯ ತಲೆಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕಲ್ಲುಗುಂಡಿಯಿಂದ ಡಿ. 5ರಂದು ಸಂಭವಿಸಿದೆ.















ಕಲ್ಲುಗುಂಡಿ ಕೂಲಿಶೆಡ್ ಬಳಿ ಕಳೆದ ಹಲವು ವರ್ಷಗಳಿಂದ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ವ್ಯಕ್ತಿಯೋರ್ವರು ಕಲ್ಲುಗುಂಡಿ ಅವರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನೇಣು ಬಿಗಿದು ಜಿಗಿದ ಸಂದರ್ಭ ಕೇಬಲ್ ಕಟ್ಟಾಗಿ ನೆಲಕ್ಕೆ ಬಿದ್ದು ತಲೆಗೆ ಗಾಯ ಮಾಡಿಕೊಂಡು ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ಐವರ್ನಾಡು ಗ್ರಾಮದ ಮಾಧವ ಎಂಬ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿ ದ್ದು ಕೇಬಲ್ ವಯರ್ ಕುತ್ತಿಗೆಗೆ ಬಿಗಿದು ಮೇಲಿನಿಂದ ಜಿಗಿದಿದ್ದಾಗ ವಯರ್ ಕಟ್ಟಾಗಿ ಅವರು ನೆಲಕ್ಕೆ ಬಿದ್ದರು. ಅಲ್ಲಿಂದ ಮೇಲೇಳಲು ಸಾಧ್ಯವಾಗದೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವರಿಗೆ ಫೋನ್ ಮಾಡಿ ವಿಷಯವನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
.
ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಮಾಧವರ ಕುತ್ತಿಗೆಯಲ್ಲಿ ಕೇಬಲ್ ವಯರ್ ಕಂಡುಬಂದಿದ್ದು ಕೂಡಲೆ ಅವರು ಆಂಬುಲೆನ್ಸ್ ನ ತಾಜು ಟರ್ಲಿ ರವರಿಗೆ ಮಾಹಿತಿ ನೀಡಿದ್ದಾರೆ. ತಾಜುರವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಅವರನ್ನು ತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. .



