Home Uncategorized ಗಾಂಧಿನಗರ : ಚರಂಡಿಗೆ ಸಿಲುಕಿದ ಇಂಟರ್ ಲಾಕ್ ತುಂಬಿದ ಲಾರಿ – ಟ್ರಾಫಿಕ್...

ಗಾಂಧಿನಗರ : ಚರಂಡಿಗೆ ಸಿಲುಕಿದ ಇಂಟರ್ ಲಾಕ್ ತುಂಬಿದ ಲಾರಿ – ಟ್ರಾಫಿಕ್ ಜಾಮ್

0

ಗಾಂಧಿನಗರ ಬಳಿ ಇಂಟರ್ಲಾಕ್ ತುಂಬಿದ ಲಾರಿಯೊಂದು ಹಿಂಬದಿಗೆ ಚಲಿಸುತ್ತಿದ್ದ ಸಂದರ್ಭ ಲಾರಿಯ ಚಕ್ರ ಚರಂಡಿಗೆ ಸಿಲುಕಿ ಕೆಲಕಾಲ ಟ್ರಾಫಿಕ್ ಸಮಸ್ಯೆ ಉಂಟಾದ ಘಟನೆ ಡಿಸೆಂಬರ್ 5ರಂದು ಸಂಜೆ ನಡೆಯಿತು.

ಸ್ಥಳೀಯ ಕಟ್ಟಡದ ಆವರಣಕ್ಕೆ ಇಂಟರ್ಲಾಕ್ ಅಳವಡಿಸಲು ಲಾರಿಯಲ್ಲಿ ಇಂಟರ್ಲಾಕ್ ಬಂದಿದ್ದು ಲಾರಿ ರಿವರ್ಸ್ ಬರುತ್ತಿದ್ದಾಗ ಇಂದಿನ ಚಕ್ರ ಪಕ್ಕದ ಚರಂಡಿಯ ಸ್ಲಾಬ್ ಮುರಿದು ಚರಂಡಿಗೆ ಇಳಿದಿದೆ. ಈ ಸಂದರ್ಭದಲ್ಲಿ ಲಾರಿ ಹಿಂದೆ ಅಥವಾ ಮುಂದೆ ಚಲಿಸಲು ಸಾಧ್ಯವಾಗದೆ ಹೋಯ್ತು.ಬಳಿಕ ಸಂಬಂಧಪಟ್ಟವರು ಲಾರಿಯಿಂದ ಇಂಟರ್ಲಾಕ್ ಖಾಲಿ ಮಾಡಲು ಸುಮಾರು 2 ಗಂಟೆ ಕಾಲ ಪ್ರಯತ್ನಿಸಬೇಕಾಯಿತು. ಅದುವರೆಗೆ ಹೆದ್ದಾರಿಯಲ್ಲಿ ಇತರ ವಾಹನ ಸವಾರಕ್ಕೆ ತೊಡಕು ಉಂಟಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

NO COMMENTS

error: Content is protected !!
Breaking