Home Uncategorized ಸುಳ್ಯದಲ್ಲಿ ಸಮೃದ್ಧಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 32 ನೇ ಶಾಖೆ ಉದ್ಘಾಟನೆ

ಸುಳ್ಯದಲ್ಲಿ ಸಮೃದ್ಧಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 32 ನೇ ಶಾಖೆ ಉದ್ಘಾಟನೆ

0

ಸದಸ್ಯರ ನಂಬಿಕೆ, ವಿಶ್ವಾಸದಿಂದ ಸಂಸ್ಥೆಯು ಅಗಾಧವಾಗಿ ಬೆಳೆದಿದೆ,
50 ಶಾಖೆಗಳನ್ನು ಹೊಂದುವ ಗುರಿ ಇದೆ : ಶಾಸಕ ಸಮೃದ್ಧಿ ವಿ. ಮಂಜುನಾಥ್

ಮುಳಬಾಗಿಲು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಮೃದ್ಧಿ ವಿ. ಮಂಜುನಾಥ್ ರವರ ನೇತೃತ್ವದ ಸಮೃದ್ಧಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 32 ನೇ ಶಾಖೆಯು ಸುಳ್ಯ ಸೆಂಟರ್ ಬಿಲ್ಡಿಂಗ್ ನಲ್ಲಿ ಡಿ. 6 ರಂದು ಶುಭಾರಂಭಗೊಂಡಿತು.

ಸೊಸೈಟಿಯ ಸಂಸ್ಥಾಪಕರು, ಶಾಸಕರಾದ ಸಮೃದ್ಧಿ ವಿ. ಮಂಜುನಾಥ್ ರವರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿ “ನಮ್ಮ ಸಂಸ್ಥೆ ಯನ್ನು14 ವರ್ಷಗಳಿಂದ ನಡೆಸಿಕೊಂಡುಬರಲಾಗುತ್ತಿದ್ದುಸದಸ್ಯರನಂಬಿಕೆ,ವಿಶ್ವಾಸದಿಂದ ಸಂಸ್ಥೆಯು ಅಗಾಧವಾಗಿ ಬೆಳೆದಿದೆ.
ದ. ಕ. ಜಿಲ್ಲೆಯಲ್ಲಿ ಪ್ರಥಮ ಶಾಖೆಯನ್ನುಬೆಳ್ತಂಗಡಿಯಲ್ಲಿ ಪ್ರಾರಂಭಿಸಿದ್ದು ಇದೀಗ 32 ನೇ ಶಾಖೆ ಸುಳ್ಯದಲ್ಲಿ ಪ್ರಾರಂಭಿಸಿದ್ದೇವೆ. ಮುಂದಿನ 2026 ರ ಅವಧಿಯಲ್ಲಿ ಒಟ್ಟು 50 ಶಾಖೆಗಳನ್ನು ಸಂಸ್ಥೆ ಹೊಂದುವ ಗುರಿ ಇದೆ. ಇತ್ತೀಚಿಗೆ ಡೂಪ್ಲಿಕೇಟ್ ಸೊಸೈಟಿಗಳು ಅಲ್ಲಲ್ಲಿ ತಲೆ ಎತ್ತಿ ಜನರನ್ನು ಮೋಸದ ಬಲೆಗೆ ಬೀಳಿಸುತ್ತಿದೆ.ಇಂತಹ ಸೊಸೈಟಿಗಳ ವಿರುದ್ಧ ಪರಿಶೀಲಿಸಿ ಕಡಿವಾಣ ಹಾಕುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರುಗಳಾದ ಮಂಜುನಾಥ್ ಗೌಡ ಧರ್ಮಸ್ಥಳ, ರಾಘವೇಂದ್ರ ಪೂಜಾರಿ ಉಡುಪಿ, ಬಿ. ಎಸ್. ಭಟ್ ಬೆಂಗಳೂರು, ಅಮರೇಶ್ ಎಸ್. ರಾವ್, ಮೋಹನ್ ಕುಮಾರ್ ಯು. ಉಡುಪಿ ಉಪಸ್ಥಿತರಿದ್ದರು.
ಪುರೋಹಿತ ನಟರಾಜ್ ಶರ್ಮ ರವರ ನೇತೃತ್ವದಲ್ಲಿ ವಾಸ್ತು ಹೋಮ, ಗಣಪತಿ ಹವನ ಹಾಗೂ ಧನಲಕ್ಷ್ಮೀ ಪೂಜೆಯು ನೆರವೇರಿತು.
ಈ ಸಂದರ್ಭದಲ್ಲಿ ಶಾಸಕರನ್ನು ಬೆಳ್ತಂಗಡಿ, ಪುತ್ತೂರು, ಸುಳ್ಯ ಶಾಖೆಯ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.


ಶಾಖಾ ವ್ಯವಸ್ಥಾಪಕರಾದ ಅಶೋಕ್ ಮತ್ತು ಅಶ್ವಿತ್ ಸ್ವಾಗತಿಸಿದರು.
ಶ್ರೀಮತಿ ಚರಿಷ್ಮ ಕಡಪಳ ಕಾರ್ಯಕ್ರಮನಿರೂಪಿಸಿದರು.ಸಂಸ್ಥೆಯ ಆಡಳಿತ ಮಂಡಳಿ, ಆಡಳಿತ ವರ್ಗ, ಕಾರ್ಯಕಾರಿ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಸದಸ್ಯರು ಭಾಗವಹಿಸಿದರು.

NO COMMENTS

error: Content is protected !!
Breaking