Home Uncategorized ಪಕ್ಷದ ನಾಯಕರು ಪಕ್ಷವನ್ನು ಇಬ್ಭಾಗ ಮಾಡುವ ಕೆಲಸ ಮಾಡಬಾರದು

ಪಕ್ಷದ ನಾಯಕರು ಪಕ್ಷವನ್ನು ಇಬ್ಭಾಗ ಮಾಡುವ ಕೆಲಸ ಮಾಡಬಾರದು

0

ಟಿ.ಎಂ.ಶಹೀದ್ ಪಕ್ಷದ ಸಿದ್ಧಾಂತ ಪಾಲಿಸದವರ ಬೆಂಬಲಕ್ಕೆ ನಿಂತವರು

ಸಂಪಾಜೆ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿಕೆ

“ಪಕ್ಷದ ನಾಯಕರು ಪಕ್ಷವನ್ನು ಇಬ್ಭಾಗ ಮಾಡುವ ಕೆಲಸ ಯಾವತ್ತೂ ಮಾಡಬಾರದು. ಒಟ್ಟಾಗಿ ಸೇರಿಸಿಕೊಂಡು ಕೆಲಸಗಳನ್ನು ಮಾಡಬೇಕು. ಟಿ.ಎಂ. ಶಹೀದ್‌ರವರು ಪಕ್ಷದ ಸಿದ್ಧಾಂತವನ್ನು ಪಾಲಿಸದವರ ಬೆಂಬಲಕ್ಕೆ ನಿಂತವರು. ಒಂದು ಬಣದೊಂದಿಗೆ ಸೇರಿಕೊಳ್ಳುವುದಲ್ಲ. ಎಲ್ಲರನ್ನು ಜತೆಯಾಗಿ ಕರೆದುಕೊಂಡು ಹೋಗಬೇಕು. ಹಾಗೆ ಮಾಡಿದಾಗ ಅಸಮಾಧಾನ ಆಗುವುದು ಸಹಜ” ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ.

ಡಿ.೬ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಡಿ.೭ರಂದು ಮತಗಳ್ಳತನದ ವಿರುದ್ಧ ಜಾಗೃತಿ ಜಾಥಾ ಕುರಿತು ವಿವರ ನೀಡಲು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆಯವರು ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಟಿ.ಎಂ.ಶಹೀದ್ ರ ಪ್ರಯತ್ನದಿಂದ ಸಂಪಾಜೆ ಗ್ರಾಮಕ್ಕೆ ೧ ಕೋಟಿ ರೂ. ಹಾಗೂ ಐವನ್ ಡಿಸೋಜ ರವರ ಶಿಫಾರಸಿನ ಮೇರೆಗೆ ರೂ. ೪೦ ಲಕ್ಷ ರೂ ಅನುದಾನ ಬಂದಿದೆ. ಅದನ್ನು ನಾವು ಸ್ವಾಗತಿಸಿzವೆ. ಆದರೆ ಕಾರ್ಯಕ್ರಮ ಶಂಕುಸ್ಥಾಪನೆ ಮಾಡುವ ಸಂದರ್ಭ ಅವರು ಪಕ್ಷದವರ ಗಮನಕ್ಕೆ ತಂದು, ಗ್ರಾ.ಪಂ. ಮೂಲಕ ಕಾರ್ಯಕ್ರಮ ಮಾಡಬೇಕಿತ್ತು. ಪ್ರೋಟೊಕಾಲ್ ಎಲ್ಲವೂ ನಮಗೆ ಗೊತ್ತಿದೆ. ಸರಕಾರಗಳು ಅನುದಾನ ನೀಡಿದಾಗ ಆಯಾ ರಾಜಕೀಯ ಪಕ್ಷಗಳು ಲಾಭ ಪಡೆಯುವುದು ಸಾಮಾನ್ಯ. ಇಲ್ಲಿ ನಮ್ಮ ಪಕ್ಷ ಅದರ ಲಾಭ ಪಡೆಯಬೇಕಿತ್ತು. ಪಕ್ಷದ ಅಧ್ಯಕ್ಷನಾಗಿ ನನಗೇ ಆಹ್ವಾನ ಇರಲಿಲ್ಲ'' ಎಂದ ಅವರು, ಪಕ್ಷದ ನಾಯಕರು ಪಕ್ಷವನ್ನು ಇಬ್ಬಾಗ ಮಾಡುವ ಕೆಲಸ ಯಾವತ್ತೂ ಮಾಡಬಾರದು. ರಾಜ್ಯ ಮಟ್ಟದ ನಾಯಕರು ಇದೆಲ್ಲವನ್ನು ತಿಳಿದು ವರ್ತಿಸಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ'' ಎಂದರು. ಸಂಪಾಜೆ ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಸಂದರ್ಭ ಪಕ್ಷದ ವತಿಯಿಂದ ಆದ ತೀರ್ಮಾನಕ್ಕೆ ವಿರುದ್ಧಾಗಿ ನಡೆದವರು ಯಾರು ? ಆ ಬಳಿಕ ವಿಧಾನಸಭಾ ಚುನಾವಣಾ ಸಂದರ್ಭ ಪಕ್ಷದ ವಿರುದ್ಧ ನೋಟಾ ಮತ ಕೇಳಿದ್ದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಪಕ್ಷದ ವಿರುದ್ಧ ಕೆಲಸ ಮಾಡಿದ ಆ ವ್ಯಕ್ತಿಯನ್ನು ೬ ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿತ್ತು. ಆದರೂ ನಾವೆಲ್ಲ ಒಟ್ಟಾಗಿ ಹೋಗಬೇಕೆಂದು ಒಂದು ಚುನಾವಣೆಯಲ್ಲಿ ಜತೆಯಾದೆವು. ಬಳಿಕ ಬಂದ ಸಹಕಾರ ಸಂಘದ ಚುನಾವಣೆಯಲ್ಲಿ ಅದೇ ವ್ಯಕ್ತಿ ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಿಂತಿದ್ದಾರೆ. ಇದರಿಂದಾಗಿ ಅಂತರ ಮತ್ತಷ್ಟು ಹೆಚ್ಚಾಗಿದೆ. ಪಕ್ಷದ ಶಿಸ್ತು, ಸಿದ್ಧಾಂತ ಪಾಲಿಸದೇ ಇರುವವರ ಜತೆ ಸೇರುತ್ತಾರೆ ಎಂದಾದರೆ ಅವರು ಪಕ್ಷವನ್ನು ಇಬ್ಬಾಗ ಮಾಡಿದ್ದಾರೆಂದು ಅರ್ಥ. ಶಿಸ್ತು ಪಾಲಿಸದೇ ಇದ್ದವರನ್ನು ಕುಳಿತುಕೊಂಡು ಅವರಿಗೆ ತಿಳಿ ಹೇಳುವ ಕೆಲಸ ಮಾಡಬೇಕಿತ್ತು ಎಂದು ಸೋಮಶೇಖರ ಕೊಯಿಂಗಾಜೆಯವರು ಹೇಳಿದರು.

ಜಿ.ಕೆ. ಹಮೀದ್‌ರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂಬ ಪ್ರತಿ ನಮಗೆ ಬಂದಿದೆ. ಆದ್ದರಿಂದ ಗ್ರಾಮ ಮಟ್ಟದಲ್ಲಾಗುವ ಪಕ್ಷದ ಕಾರ್ಯಕ್ರಮಕ್ಕೆ ಅವರಿಗೆ ನಾವು ಆಹ್ವಾನ ನೀಡುತ್ತಿಲ್ಲ. ತಾಲೂಕು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾದರೆ ಬ್ಲಾಕ್ ನವರಲ್ಲಿ ಪ್ರತಿಕ್ರಿಯೆ ಕೇಳಿ. ಅವರನ್ನು ಉಚ್ಚಾಟನೆ ಮಾಡಿರುವುದರಿಂದಲೇ ಅಲ್ಪಸಂಖ್ಯಾತ ಘಟಕದಿಂದ ಅವರನ್ನು ಅಧ್ಯಕ್ಷತೆಯಿಂದ ತೆಗೆದು ಇಸ್ಮಾಯಿಲ್‌ರನ್ನು ನೇಮಿಸಿದ್ದು ಎಂದವರು ಸ್ಪಷ್ಟನೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ.ಜಾನಿ, ಮುಖಂಡರಾದ ವಸಂತ ಪೆಲ್ತಡ್ಕ, ಲೂಕಾಸ್ ಟಿ.ಐ, ರಾಜು ನೆಲ್ಲಿಕುಮೇರಿ ಉಪಸ್ಥಿತರಿದ್ದರು.

NO COMMENTS

error: Content is protected !!
Breaking