














ಚೆಂಬು – ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ ಡಿ.13 ರಂದು ನಡೆಯಲಿದೆ.
ಡಿ.10 ರಂದು ಪೂ.9 ಕ್ಕೆ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಭಂಡಾರಕ್ಕೆ ಹೋಗುವುದು. ಡಿ.11 ರಂದು ಭಂಡಾರ ಬರುವುದು. ರಾತ್ರಿ ಗಂಟೆ 2 ಕ್ಕೆ ಹಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡುವುದು, ಪ್ರಾತಃಕಾಲ 4ಕ್ಕೆ ನೇಮೋತ್ಸವ. ಡಿ.12 ಎಡೆಕಡಪು.ಡಿ.13 ರಂದು ಪ್ರಾತಃಕಾಲ 4ಕ್ಕೆ ಕಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡುವುದು. ಬೆಳಿಗ್ಗೆ 8ಕ್ಕೆ ಉಳ್ಳಾಕುಲು ಕುದುರೆ ಬಂಡಿ ಎಳೆಯುವುದು.10ಕ್ಕೆ ಉಳ್ಳಾಕುಲು ನೇಮೋತ್ಸವ, ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 2 ರಿಂದ ಪರಿವಾರ ದೈವಗಳ ನಡಾವಳಿ, ಡಿ.14ರಂದು ಪೂ.9ಕ್ಕೆ ಭಂಡಾರ ಕಳುಹಿಸುವುದು.ಸಂಜೆ 6.30 ರಿಂದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 9.30 ರಿಂದ ಶ್ರೀ ಗೋಪಾಲಕೃಷ್ಣ ಕಲಾ ಮಂಡಳಿ ಎಡಮಂಗಲ ಇವರಿಂದ ಯಕ್ಷಗಾನ ಬಯಲಾಟ ಪಾಪಣ್ಣ ವಿಜಯ ಗುಣಸುಂದರಿ ನಡೆಯಲಿದೆ.



