















ಸುಳ್ಯದ ಜೇನು ಸೊಸೈಟಿಯ ಆಧುನಿಕ ಸಂಸ್ಕರಣಾ ಘಟಕಕ್ಕೆ ಮಂಗಳೂರಿನ ಕೃಷಿ ಇಲಾಖೆಯ ಜಾಯಿಂಟ್ ಡೈರೆಕ್ಟರ್ ಹೋನಪ್ಪ ಗೌಡ ಮತ್ತು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜೇನು ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಹಕಾರಿ ರತ್ನ ಚಂದ್ರ ಕೋಲ್ಚಾರು ಅವರು ಅವರನ್ನು ಸನ್ಮಾನಿಸಿದರು.ಅಧಿಕಾರಿಗಳು ಘಟಕದಲ್ಲಿ ಉತ್ಪಾದನೆಯಾಗುತ್ತಿರುವ ಉತ್ತಮ ಗುಣಮಟ್ಟದ ಜೇನು ನೈಸರ್ಗಿಕವಾಗಿ ಜೇನು ಹಾಗೂ ಜೇನಿನಿಂದ ತಯಾರಾಗಿರುವ ಹನಿ ಚಾಕೊಲೇಟ್ ಮತ್ತು ಹನಿ ಪೇಪರ್ ಚಾಕೊಲೇಟ್‌ಗಳನ್ನು ಪರಿಶೀಲಿಸಿದರು. ಯಾವುದೇ ಕಲಬೆರಕೆಯಿಲ್ಲದೆ, ಸಂಪೂರ್ಣ ನೈಸರ್ಗಿಕ ಜೇನಿನಿಂದ ತಯಾರಾಗಿರುವ ಈ ಉತ್ಪನ್ನಗಳು ಆರೋಗ್ಯಕಾರಿ ಗುಣಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಜೇನು ಸೊಸೈಟಿಯ ಅಧ್ಯಕ್ಷ ಸಹಕಾರಿ ರತ್ನ ಚಂದ್ರ ಕೋಲ್ಚಾರು, ಸುಪ್ರೀತ್ ಮೋಂಟಡ್ಕ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು


