Home Uncategorized ನಾನು ಅಲ್ಪಸಂಖ್ಯಾತ ಎಂದು ನನ್ನನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ

ನಾನು ಅಲ್ಪಸಂಖ್ಯಾತ ಎಂದು ನನ್ನನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ

0

ಅನುದಾನಗಳನ್ನು ತಂದು ನಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡುವುದೇ ತಪ್ಪಾ :ಟಿಎಂ ಶಹೀದ್ ತೆಕ್ಕಿಲ್ ಪ್ರಶ್ನೆ

ಸಂಪಾಜೆ ಗ್ರಾಮ ನಾನು ಬೆಳೆದು ಬಂದ ಊರು. ಈ ಗ್ರಾಮದಲ್ಲಿ ತೆಕ್ಕಿಲ್ ಕುಟುಂಬದ ಪದನಾಮವೂ ಕೂಡ ಬಹಳ ಇಂದಿನ ಕಾಲದಲ್ಲಿ ಬಂದಿರುವಂಥದ್ದು. ಅಂತಹ ನಮ್ಮ ಗ್ರಾಮದ ಅಭಿವೃದ್ಧಿಗೆ ಗ್ರಾಮದವನಾದ ನಾನು ಸರಕಾರದಿಂದ ಗ್ರಾಮಕ್ಕೆ ಅನುದಾನಗಳನ್ನು ತರುವುದೇ ತಪ್ಪಾ? ಅಥವಾ ಶಹೀದ್ ಅಲ್ಪಸಂಖ್ಯಾತ ಎಂಬ ನಿಟ್ಟಿನಲ್ಲಿ ನನ್ನನ್ನು ತೇಜೋವದೆ ಮಾಡಲು ಹೊರಟಿದ್ದಾರಾ? ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕಳೆದ ೩೫ ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ತಳಮಟ್ಟದ ರಾಜಕೀಯದಿಂದ ಕೇಂದ್ರದ ರಾಜಕೀಯದವರೆಗೆ ನಾನು ಮುಟ್ಟಿದ್ದೇನೆ.
ಆದ್ದರಿಂದ ಬೇರೆ ಬೇರೆ ಪಕ್ಷದಿಂದ ಬಂದವರು ಅಥವಾ ಹೋದವರಿಂದ ನಾನು ರಾಜಕೀಯ ಪಾಠ ಕಲಿಯಬೇಕಾಗಿಲ್ಲ ಎಂದು ತೀಕ್ಷಣವಾಗಿ ಅವರು ಹೇಳಿದರು.ಅರಂತೋಡು ಗ್ರಾಮಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಂದಿದ್ದೇನೆ. ಕೆಲವರು ತನ್ನ ವಿರುದ್ಧ ಹೈಕಮಾಂಡ್‌ಗೆ ದೂರು ನೀಡುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಗಳನ್ನು ಮಾಡಿದ್ದಾರೆ. ದೂರು ನೀಡುವವರು ಮೊದಲು ಬ್ಲಾಕ್, ಡಿಸಿಸಿಗೆ ನೀಡಲಿ ಅದು ಬಿಟ್ಟು ಹೈಕಮಾಂಡ್‌ಗೆ ದೂರು ನೀಡುವ ಕ್ರಮ ಪಕ್ಷದಲ್ಲಿ ಇಲ್ಲ ಎಂದು ಹೇಳಿದರು.


ಎಲ್ಲರೂ ತಪ್ಪು ಮಾಡುವವರೇ ಇರುವಾಗ ಕೆಲವು ಸಂದರ್ಭದಲ್ಲಿ ಎಲ್ಲರಿಂದಲೂ ಸಣ್ಣಪುಟ್ಟ ತಪ್ಪುಗಳು ಗೊಂದಲ ಉಂಟಾಗುತ್ತದೆ. ಅದನ್ನು ಸರಿಪಡಿಸಿಕೊಂಡು ಅಭಿವೃದ್ಧಿ ಕಾರ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿಕೊಂಡು ನಾವು ಮುಂದೆ ಸಾಗಬೇಕಾಗಿದೆ.
ಅನುದಾನದಲ್ಲಿ ಪಕ್ಷ ಬೇಧ ಇರುವುದಿಲ್ಲ. ಅಲ್ಲದೆ ಸಂಪಾಜೆ ಅರಂತೋಡು ಭಾಗದಲ್ಲಿ ನನ್ನ ಕುಟುಂಬದ ಸದಸ್ಯರು ಅದೇ ರೀತಿ ನಮ್ಮೂರಿನ ಎಲ್ಲಾ ಬಂದವರು ಪರಸ್ಪರ ಸೌಹಾರ್ದವಾಗಿ ಬೆಳೆಯುತ್ತಿರುವ ನಾಡಾಗಿದ್ದು ನಾನು ಬಿಜೆಪಿಯವರಿಗೆ ಅನುದಾನ ತಂದು ಕೊಡುತ್ತೇನೆ ಮತ್ತು ಅವರೊಂದಿಗೆ ನಾನು ಇದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅದು ನನ್ನ ಮೇಲೆ ಇರುವ ಹೊಟ್ಟೆ ಕಿಚ್ಚಿನಿಂದ ಮಾಡುತ್ತಿದ್ದಾರೆ. ಅದಕ್ಕೆ ಮದ್ದು ಇಲ್ಲ ಎಂದು ಅವರು ಹೇಳಿದರು.


ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಜಿ.ಕೆ.ಯವರಿಂದ ಒಂದು ಸಣ್ಣ ತಪ್ಪು ಆಗಿದೆ ಆ ತಪ್ಪನ್ನು ತಿದ್ದಿಕೊಂಡು ಅವರು ಮತ್ತೆ ಪಕ್ಷದಲ್ಲಿ ದುಡಿಯುತ್ತಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಎಂದು ನಿರಂತರವಾಗಿ ಅವರನ್ನು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ ಎಂದು ಅವರು ಹಮೀದ್ ಪರವಾಗಿ ಮಾತನಾಡಿದರು.ಎರಡು ಬಾರಿ ಸಂಪಾಜೆ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದೆ. ಪ್ರಳಯ, ಭೂಕಂಪ ಆದ ಸಂದರ್ಭದಲ್ಲಿ ಉತ್ತಮ ಕೆಲಸವನ್ನು ಹಮೀದ್ ರವರು ಮಾಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ದುಡಿದಿದ್ದಾರೆ. ಅಭಿವೃದ್ಧಿ ಯಾರು ಮಾಡಿದರೂ ಅವರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ಸದಸ್ಯೆ ವಿಮಲಾ ಪ್ರಸಾದ್, ಪ್ರಮುಖರಾದ ಸಲೀಂ ಪೆರುಂಗೋಡಿ, ಸಿದ್ದಿಕ್ ಕೊಕ್ಕೊ, ಅಜರುದ್ದೀನ್, ಮುನೀರ್ ದಾರಿಮಿ, ಜುನೈದ್ ಉಪಸ್ಥಿತರಿದ್ದರು.

NO COMMENTS

error: Content is protected !!
Breaking