ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ -ಉದ್ಘಾಟನೆ

0

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಜ.7 ರಂದು ಪಂಜದ ಕೃಷ್ಣನಗರದಲ್ಲಿ ನಡೆಯಿತು.

4 ಲಕ್ಷ ರೂ ವೆಚ್ಚದಲ್ಲಿ ಪಂಜ-ಕೆಮ್ಮೂರು ರಸ್ತೆಯ ಚರಂಡಿ ರಚನೆ, 3ಲಕ್ಷ ರೂ ವೆಚ್ಚದಲ್ಲಿ ಪಂಜ-ಕೆಮ್ಮೂರು ರಸ್ತೆಯ ಕಾಂಕ್ರೀಟೀರಣ, 2 ಲಕ್ಷ ರೂ ವೆಚ್ಚದಲ್ಲಿ ಅಡ್ಕ ರಸ್ತೆ ನೆಕ್ಕಿಲ ಎಂಬಲ್ಲಿ ರಸ್ತೆ ಕಾಂಕ್ರೀಟೀಕರಣ , 2 ಲಕ್ಷ ರೂವೆಚ್ಚದಲ್ಲಿ ಪಲ್ಲೋಡಿ ದೈವಸ್ಥಾನಕ್ಕೆ ಹೋಗುವ ರಸ್ತೆ ಕಾಂಕ್ರೀಟೀಕರಣ, 1ಲಕ್ಷ ರೂ ವೆಚ್ಚದಲ್ಲಿ ಪಲ್ಲೋಡಿ ಜಾಕೆ ರಸ್ತೆಯಲ್ಲಿ ಚರಂಡಿ ರಚನೆ. 4ಲಕ್ಷ ರೂ ವೆಚ್ಚದಲ್ಲಿ ಪೊಳೆಂಜ- ಪಾಂಡಿಗದ್ದೆ ರಸ್ತೆ ಕಾಂಕ್ರೀಟೀಕರಣ, 5 ಲಕ್ಷ ರೂ ವೆಚ್ಚದಲ್ಲಿ ನಾಗೋಡಿ ಕೆರೆಮೂಲೆ ರಸ್ತೆ ಕಾಂಕ್ರೀಟೀಕರಣ,3 ಲಕ್ಷ ರೂ ವೆಚ್ಚದಲ್ಲಿ ಬಸ್ಸು ತಂಗುದಾಣದ ಮೇಲೆ ಚಾವಣಿಗೆ ಶೀಟು ಮಾಡು ರಚನೆ, 5 ಲಕ್ಷ ರೂ ವೆಚ್ಚದಲ್ಲಿ ಸ್ಮಶಾನದಲ್ಲಿ ನೂತನ ಶವದಹನ ಶೆಡ್ಡು ನಿರ್ಮಾಣ, 5.5 ಲಕ್ಷ ರೂ ವೆಚ್ಚದಲ್ಲಿ ಸ್ಮಶಾನದಲ್ಲಿ ಶೌಚಾಲಯ ಹಾಗೂ ಸ್ನಾನ ಗೃಹ ನಿರ್ಮಾಣ, 1.5 ಲಕ್ಷ ರೂ ವೆಚ್ಚದಲ್ಲಿ ಮೇಲಿನ ಸಂಪ ರಸ್ತೆ ಕಾಂಕ್ರೀಟೀಕರಣ, 3 ಲಕ್ಷ ರೂ ವೆಚ್ಚದಲ್ಲಿ ಅಳ್ಪೆ -ಕೋಡಿ ರಸ್ತೆ ಕಾಂಕ್ರೀಟೀಕರಣ ,1 ಲಕ್ಷ ರೂ ವೆಚ್ಚದಲ್ಲಿ ನಿಡ್ವಾಳ- ಮೇಲ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ.

ಶಾಸಕಿ ಕು.ಭಾಗೀರಥಿ ಮುರುಳ್ಯ ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರಾದ ಜಗದೀಶ್ ಪುರಿಯ, ಚಂದ್ರಶೇಖರ ದೇರಾಜೆ, ಶರತ್ ಕುದ್ವ, ಶ್ರೀಮತಿ ವೀಣಾ ಪಂಜ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುವರ್ಣಿನಿ ಎನ್ ಎಸ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ನಿರ್ದೇಶಕ ಲಿಗೋಧರ ಆಚಾರ್ಯ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲೋಕೇಶ್ ಬರೆಮೇಲು, ದಯಾನಂದ ಮೇಲ್ಮನೆ, ಗಂಗಾಧರ ಶಾಸ್ತ್ರಿ ಪುತ್ಯ, ರಮೇಶ್ ಪುತ್ಯ ,ರಂಜೀತ್,ಮನು ಯಂ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾರಾಯಣ ಕೃಷ್ಣನಗರ ಸ್ವಾಗತಿಸಿದರು ಮತ್ತು ವಂದಿಸಿದರು.