ವಿಜೃಂಭಣೆಯಿಂದ ನಡೆದ ಬೆಳ್ಳಾರೆ ದೇವಿನಗರ – ಕೊಳಂಬಳ ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಬೆಳ್ಳಾರೆ ಗ್ರಾಮದ ದೇವಿನಗರ ಕೊಳಂಬಳ (ಉಮಿಕ್ಕಳ) ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ರಕ್ತೇಶ್ವರಿ ದೇವಿ ,
ವರ್ಣಾರ ಪಂಜುರ್ಲಿ, ಕಲ್ಲುರ್ಟಿ ,ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವದ ನೇಮೋತ್ಸವವು ದೇರೆಬೈಲು ತಂತ್ರಿ ಶ್ರೀ ಪತಂಜಲಿ ಶಾಸ್ತ್ರಿ ಮುಕ್ಕೂರು ಇವರ ನೇತೃತ್ವದಲ್ಲಿ
ಜ.06 ಮತ್ತು ಜ.07 ರಂದು ವಿಜೃಂಭಣೆಯಿಂದ ನಡೆಯಿತು.
ಜ.06 ರಂದು ಬೆಳಿಗ್ಗೆ ಸ್ಬಸ್ತಿ ಪುಣ್ಯಾಹ,ಗಣಪತಿ ಹೋಮ, ಗೊನೆ ಕಡಿಯಲಾಯಿತು.


ಬಳಿಕ ನಾಗತಂಬಿಲ ನಡೆಯಿತು.
ಬೆಳಿಗ್ಗೆ ಶ್ರೀ ರಕ್ತೇಶ್ವರಿ ದೇವಿಯ ತಂಬಿಲ ನಡೆಯಿತು. ಸಂಜೆ ಭಂಡಾರ ತೆಗೆಯಲಾಯಿತು.
ರಾತ್ರಿ ಶ್ರೀ ರಕ್ತೇಶ್ವರಿ ದೇವಿಯ ನೇಮೋತ್ಸವ ನಡೆಯಿತು.
ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ವರ್ಣಾರ ಪಂಜುರ್ಲಿ ನೇಮೋತ್ಸವ ಭಕ್ತಿ ,ಸಂಭ್ರಮದಿಂದ ನಡೆಯಿತು.


ಜ.07 ರಂದು ರಾತ್ರಿ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು.
ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಕುಪ್ಪೆಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಕೆ,ಕಾರ್ಯದರ್ಶಿ ರಾಮಕೃಷ್ಣ ಪ್ರಭು,ಕೋಶಾಧಿಕಾರಿ ವಸಂತ ಬೋರ್ಕರ್,ಆಡಳಿತ ಮಂಡಳಿ ಸದಸ್ಯರಾದ ದಿವಾಕರ ರೈ ಮರಿಕೇಯಿ,ಪ್ರದೀಪ್ ರೈ ಅಜ್ರಂಗಳ,ದಿನೇಶ್ ಕುಮಾರ್ ಕೊಳಂಬಳ,ಗೋವರ್ಧನ ಬೆಳ್ಳಾರೆ,ಶಿವರಾಮ ಶೆಟ್ಟಿ ಎಂ, ಸಂಜೀವ ಕಲಾಯಿ, ಊರ ಹತ್ತು ಸಮಸ್ತರು,ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.