ಅರ್ಧಂಬರ್ಧ ಜೋಡಣೆ ,ಸ್ಥಳೀಯರಿಂದ ಆಕ್ರೋಶ















ಸುಳ್ಯ ನಗರದಲ್ಲಿ ಅಮೃತ 2 ಯೋಜನೆಯ ಪೈಪ್ ಅಳವಡಿಕೆ ಕಾಮಗಾರಿಗೆ ರಸ್ತೆ ಬದಿಯಿಂದ ತೆರವುಗೊಳಿಸಿದ್ದ ಇಂಟರ್ಲಾಕ್ ಗಳ ಮರುಜೋಡಣೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿಕೊಳ್ಳುತ್ತಿದ್ದಾರೆ.
ಮರು ಜೋಡಣೆ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡದೆ, ಇಟ್ಟಿರುವ ಕಲ್ಲುಗಳು ಅಂಕುಡೊಂಕಾಗಿ ಒಟ್ಟಾರೆಯಾಗಿ ಜೋಡಿಸಿಕೊಂಡು ಹೋಗಿದ್ದು ರಸ್ತೆ ಬದಿಗಳಲ್ಲಿಮತ್ತೆ ಹೊಂಡ ಗುಂಡಿಯಾಗಲು ಕಾರಣವಾಗಿದೆ.

ಒಂದು ವರ್ಷಗಳ ಕಾಲ ರಸ್ತೆಯ ಬದಿಯಲ್ಲಿ ಅನಾಥವಾಗಿ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದ ಇಂಟರ್ಲಾಕ್ ಗಳು ನಗರ ಪಂಚಾಯತಿ ಸಭೆಗಳಲ್ಲಿ ಮತ್ತು ಸಾರ್ವಜನಿಕರ ವಲಯದಲ್ಲಿ ಆದ ಗಂಭೀರ ಚರ್ಚೆಗಳಿಂದ ಮತ್ತೆ ಮರುಜೋಡಣೆ ಕಾರ್ಯಕ್ಕೆ ಗುತ್ತಿಗೆದಾರರು ಕೆಲಸ ಆರಂಭಿಸಿದರು.ಆದರೆ ಈ ಕೆಲಸ ಮತ್ತೆ ಅರ್ಧದಲ್ಲಿಯೇ ನಿಂತು ಹೋಗಿದ್ದು ಆದ ಕೆಲಸವೂ ಕೂಡ ಜನರ ಕಣ್ಣಿಗೆ ಮಣ್ಣೆರಚ್ಚುವ ರೀತಿಯಲ್ಲಿ ಆಗಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ಕಡೆ ತೋಡಿನ ರೀತಿ ಆಗಿದ್ದು ರಸ್ತೆ ಬದಿಯಲ್ಲಿ ಚಲಿಸುವ ಪಾದಚಾರಿಗಳಿಗೆ ಸಮಸ್ಯೆ ಉಂಟು ಮಾಡುತ್ತಿದೆ.
ಅಲ್ಲದೆ ಕಾಮಗಾರಿಯ ಸಂದರ್ಭ ತೆರವು ಗೊಳಿಸಿದ್ದ ಲಕ್ಷಾಂತರ ರೂಪಾಯಿಗಳ ಇಂಟರ್ಲಾಕ್ ಗಳು ಕೆಲವು ಕಡೆ ಮಾಯವಾಗಿದ್ದು,
ಯೋಜನೆಯ ಹಣವೆಲ್ಲ ಈ ರೀತಿ ಪೋಲಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.








